Online News in ಕನ್ನಡ

ಡಾ.ಹೆಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಾಯ: ಜೂ.11ರಂದುಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ

ತಿ. ನರಸೀಪುರ : ನಾಲ್ಕು ದಶಕಗಳ ಸುಧೀರ್ಘ ರಾಜಕಾರಣದಲ್ಲಿ ಕಪ್ಪುಚುಕ್ಕಿ ಇಲ್ಲದೆ ಉತ್ತಮ ಆಡಳಿತ ನೀಡಿರುವ ಹಿರಿಯ ಪ್ರಭಾವಿ ಅನುಭವ ರಾಜಕಾರಣಿ ಸಚಿವ ಹೆಚ್. ಸಿ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೇ 11ರಂದು ಬೃಹತ್ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಮಾಜಿ ತಾಪಂ ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಕುಕ್ಕೂರು ಗಣೇಶ್ ಮನವಿ ಮಾಡಿದರು.
ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಟಿ.ನರಸಿಪುರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕರೆದಿದ್ದ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಎಚ್. ಸಿ
.ಮಹದೇವಪ್ಪ ಒಂದು ರಾಜಕೀಯ ಶಕ್ತಿ. ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟಗೆ ಸೇರಿಸಿದಿದ್ದಲ್ಲಿ ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟಬುತ್ತಿ. ಮಹದೇವಪ್ಪ ಅವರು ತಮಗೆ ನೀಡಿದ್ದ ಯಾವುದೇ ಖಾತೆಯನ್ನು ಯಾವುದೇ ಉತ್ತಮವಾಗಿ ನಿರ್ವಹಿಸಿ ಸರ್ಕಾರದ ಯೋಜನೆಗಳನ್ನು ಕಟ್ಟೆಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢ ಗೊಳಿಸಿದ್ದಾರೆ.
ಹಾಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹದೇವಪ್ಪ ಅವರಿಗೆ ಸಚಿವ ಸ್ಥಾನವನ್ನು ನೀಡಲೇಬೇಕು ಆಗ್ರಹಿಸಿದರು.
ಮಾಜಿ ತಾಪಂ ಅಧ್ಯಕ್ಷ ದೊಡ್ಡ ಬಾಗಿಲು ಮಲ್ಲಿಕಾರ್ಜುನ ಮಾತನಾಡಿ ರಾಜ್ಯದ ಏಕೈಕ ಅಹಿಂದ ನಾಯಕ ಹಾಗೂ ಮಾಜಿ ಸಿ. ಎಂ.ಸಿದ್ದರಾಮಯ್ಯ ಅವರ ಪರಮಾಪ್ತ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದ ಮೊದಲನೇ ಪಟ್ಟಿಯಲ್ಲಿ ಸಚಿವರಾಗಬೇಕಿತ್ತು. ಒಬ್ಬ ಹಿರಿಯ ಅನುಭವಿ ರಾಜಕಾರಣಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಹಳೇ ಮೈಸೂರು ಭಾಗದ ಜನತೆಗೆ ತುಂಬಾ ನೋವಾಗಿದೆ. ಹಾಗಾಗಿ ಎರಡನೇ ಪಟ್ಟಿಯಲ್ಲಿ ಇವರಿಗೆ ಉನ್ನತ ಸಚಿವ ಸ್ಥಾನವನ್ನು ನೀಡಬೇಕು. ಇದಕ್ಕಾಗಿ ವರಿಷ್ಠರನ್ನು ಒತ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮೈಸೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮದಿಂದಲೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಬೇಕೆಂದು ತಿಳಿಸಿದರು.
ರಾಜ್ಯದ ಪ್ರಭಾವಿ ರಾಜಕಾರಣಿ ಹಾಗೂ ಹಳೇ ಮೈಸೂರಿನ ಭಾಗದ ಹಿರಿಯ ಮುತ್ಸದಿ ರಾಜಕಾರಣಿ ಡಾ. ಹೆಚ್.ಸಿ. ಮಹದೇವಪ್ಪ ಅವರಿಗೆ ಮುಖ್ಯಮಂತ್ರಿ ಕೊಡಬೇಕಿತ್ತು. ಆದರೆ ವರಿಷ್ಠರ ತೀರ್ಮಾನದಂತೆ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿದೆ. ಅದು ನಾವು ಸ್ವಾಗತಿಸುತ್ತೇವೆ. ಆದರೆ, ನಮ್ಮ ನಾಯಕರನ್ನು ಮೊದಲ ಸಚಿವ ಸಂಪುಟದಲ್ಲಿ ಕೈ ಬಿಟ್ಟಿರುವುದು ರಾಜ್ಯದ ಅಹಿಂದ ವರ್ಗಕ್ಕೆ ತುಂಬಾ ಬೇಸರ ಉಂಟಾಗಿದೆ. ಹಾಗಾಗಿ ಎರಡನೇ ಪಟ್ಟಿಯಲ್ಲಿ ಮಹದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನ ಜತೆಗೆ ಉನ್ನತ ಸಚಿವ ಸ್ಥಾನ ಇರಬೇಕೆಂದು ಜೂನ್ 11ರಂದು. ಬೆಳಗ್ಗೆ 10.30ಘಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದರಿಂದ ತಾಲೂಕಿನ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೋತ್ತೆಗಾಲ ಬಸವರಾಜು, ಸೋಸಲೆ ಪರಶಿವಮೂರ್ತಿ, ರಂಗಸ್ವಾಮಿ, ಕೃಷ್ಣ, ಬನ್ನೂರು ಬ್ಲಾಕ್ ಅಧ್ಯಕ್ಷ ಚನ್ನಕೇಶವ, ಮಾತನಾಡಿದರು, ಸಭೆಯಲ್ಲಿ ಸೋಮನಾಥಪುರ ರಾಮಲಿಂಗಯ್ಯ, ಬನ್ನೂರು ಮುನ್ನರ್ ಪಾಷಾ, ನರಸಿಂಹ ಮಾದನಾಯ್ಕ, ಶೇಷಾದ್ರಿ, ಸಾಗರ್, ಸಿದ್ದಶೆಟ್ಟಿ ಲಕ್ಷ್ಮಣ, ಶಿವಕುಮಾರ್, ಸೋಮಣ್ಣ, ಕಲಿಯೂರ್ ಶಿವಣ್ಣ, ಗುರುಮೂರ್ತಿ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ನವೀನ, ವಾಟಾಳ್ ನಾಗೇಶ, ಬನ್ನೂರು ಕೃಷ್ಣ, ಗುತ್ತಿಗೆದಾರ ಅಶೋಕ್, ಮಲ್ಲಯ್ಯ, ಚಿಕ್ಕ ಸ್ವಾಮಿ, ಜೆಲ್ಲಿ ನಾಗರಾಜು, ಮೂರ್ತಿ, ಅಂದಾನಿ ಗೌಡ, ಷಡಕ್ಷರಿ, ಶಿವ ಮಲ್ಲಯ್ಯ, ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು,

Call Now Button