ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ಜೀವ ಜಲಾಶಯಗಳು ಬತ್ತಿ ಹೋಗಿರುವ ಬೆನ್ನ ಹಿಂದೆಯೆ ತಮಿಳುನಾಡಿಗೆ ಪ್ರತಿ ದಿನ 3500 ಕ್ಯೂಸೆಕ್ಸ್ ನೀರು ಬಿಡಲು ಸಿಡಬ್ಲ್ಯುಆರ್‌ಸಿ ಆದೇಶಿಸಿದೆ. ಈ ಸಂಬಂಧ ದೆಹಲಿಯಲ್ಲಿ 12 ವರ್ಷಗಳ ಬಳಿಕ ನಡೆದ ಸಭೆಯಲ್ಲಿ ಈ ಆದೇಶ ಹೊರ ಬಿದ್ದಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಕುರಿತು ಮಾತನಾಡಿರುವ ರಾಜ್ಯ ಜಲ ಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 3500 ಕ್ಯೂಸೆಕ್ಸ್‌ನಂತ 4 ಟಿಎಂಸಿಗಳಷ್ಟು ನೀರನ್ನು ಹರಿಸಲು ಹೇಳಿದೆ. ಇದಕ್ಕೆ ರಾಜ್ಯ ಸರಕಾರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈನಡುವೆ, ಕಾವೇರಿ ಜಲಾನಯನ ಪ್ರದೇಶದ ಕಬಿನಿ ಮತ್ತು ಕೆ.ಆರ್.ಎಸ್. ಅಣೆಕಟ್ಟೆಗಳಲ್ಲಿ ನೀರು ಸಂಗ್ರಹ ಕುಸಿದಿದ್ದು, ಮಳೆಯ ಅಭಾವದಿಂದ ಈ ಬಾರಿ ಕುಡಿಯವ ನೀರಿಗೂ ಸಂಕಷ್ಟ ಎದುರಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಒಂದೆಡೆ ರಾಜ್ಯದ ರೈತರು ಬೆಳೆದ ಬೆಳೆಗಳಿಗೇ ನೀಡು ನೀಡದೆ ಸದ್ಯ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಇದರ ಬೆನ್ನ ಹಿಂದೆಯೇ ತಮಿಳುನಾಡಿ ಮತ್ತೊಮ್ಮೆ ಕ್ಯಾತೆ ತೆಗೆಯುತ್ತಿದೆ.


