ಮೈಸೂರು : ಸಮಾಜದಲ್ಲಿ ಇದ್ದ ಎಲ್ಲಾ ರೀತಿಯ ಅಸಮಾನತೆ, ಅಸಮತೋಲನ, ತಾರತಮ್ಯ ಇವುಗಳ ವಿರುದ್ಧ ಬಂಡೆದ್ದು ಸಮ ಸಮಾಜದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಹರಿಕಾರ ಸಾಮಾಜಿಕ ಸುಧಾರಕ ಬಸವಣ್ಣ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ರಾಸಾಯನ ಶಾಸ್ತ್ರದ ಪ್ರಾಧ್ಯಾಪಕ ಡಾ. ತಿಪ್ಪೇಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಸಾಂಸ್ಕೃತಿಕ ಸಮಿತಿ ವತಿಯಿಂದ ಆಡಿಯೋ ವಿಜುವಲ್ ಕುಠಡಿಯಲ್ಲಿ ಏರ್ಪಡಿಸಿದ್ದ ಸಮಾಜ ಸುಧಾರಕ, ಕ್ರಾಂತಿಕಾರಿ ಬಸವಣ್ಣನವರ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇದ್ದ ಲಿಂಗ ಭೇದ ಜಾತೀಯತೆ ಹಾಗೂ ಇನ್ನಿತರ ತಾರತಮ್ಯಗಳ ವಿರುದ್ಧ ಸಮರಸಾರದ ನಿಜವಾದ ನಾಯಕ ಬಸವಣ್ಣ ಇಂದ ಅವರು ಅನುಭವ ಮಂಟಪ ಇದಕ್ಕೆ ವೇದಿಕೆಯಾಯಿತು ಎಂದರು.
ಯಾವುದೇ ಸಮಾಜದಲ್ಲಿ ಸಮಾನತೆ ಇರಬೇಕು ಹಾಗಾದರೆ ಮಾತ್ರ ಅದು ನಿಜವಾದ ಒಳಗೊಂಡ ಸಮಾಜ ಎಂದು ಅರ್ಥ. ಹಾಗಾಗಿ ಅಂತಹ ಸಮಾಜದ ಕನಸನ್ನು ಕಂಡು ಅದನ್ನು ನಿಜವಾಗಿ ಸುನಿಟಿನಲ್ಲಿ ಕೆಲಸ ಮಾಡಿದ ಮೂಲಪುರುಷ ಬಸವಣ್ಣ. ಜೊತೆಗೆ ಜಡತ್ವ ನೀಗುವ ಸಮಾಜ ಆಗಬೇಕಾದರೆ ಅದು ಕಾಯಕಕ್ಕೆ ಮಹತ್ವ ನೀಡಬೇಕು. ಹಾಗಾಗಿ ಕಾಯಕ ಮಾಡುವ ಸಮಾಜ ನಿರ್ಮಾಣಕ್ಕೆ ವೇದಿಕೆ ಹಾಕಿಕೊಟ್ಟರು. ಲಿಂಗ ತಾರತಮ್ಯ ಎಂಬುದು ಸಮಾಜದ ಜಾಡ್ಯ ಹಾಗಾಗಿ ಲಿಂಗಭೇದವಿಲ್ಲದ ಸಮಾಜದ ನಿರ್ಮಾಣಕ್ಕೆ ಅವರು ನಾಂದಿ ಹಾಡಿದರು ಎಂದು ಹೇಳಿದರು.
ಲಿಂಗ ತಾರತಮ್ಯ ಇರಬಾರದು. ಸ್ತ್ರೀ ಸಮಾನತೆ ಸಮಾನತೆ ಇರಬೇಕು. ಪುರುಷರಿಗೆ ಸಮಾನವಾಗಿ ಮಹಿಳೆ ಹಕ್ಕು ಇರಬೇಕು ಇಂದ ಬಸವಣ್ಣನವರ ನೀತಿಯ ವಿರುದ್ಧ,ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದರು. ಆಗ ಅನುಭವ ಮಂಟಪ, ಅಂದರೆ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆ ಇಂತಹ ವ್ಯವಸ್ಥೆ ರೂಪಿಸಿ ರೂಪಿಸಿ ಎಲ್ಲಾ ವರ್ಗ, ಲಿಂಗದವರ ಪ್ರಾತಿನಿಧ್ಯ ನೀಡಿದರು. ಇದು 12 ನೇ ಶತಮಾನದಲ್ಲೆ ದಿಟ್ಟ ಕ್ರಾಂತಿಕಾರ ಹೆಜ್ಜೆ ಎಂದು ಬಣ್ಣಿಸಿದರು.
ಕಾಯಕ, ದಾಸೋಹ, ಮತ್ತು ಸಮಾನತೆ ಸ್ವೀಕಾರ ಆಚರಿಸುವ ಎಲ್ಲರೂ ಶರಣರು ಎಂದ ಅವರು, ಅನುಲೋಮ ವಿವಾಹ ಅಂದರೆ ಅಂತರ್ಜಾತಿ ವಿವಾಹಕ್ಕೆ ವೇದಿಕೆ ಮಾಡಿಕೊಟ್ಟು ಲಾವಣ್ಯ ಮತ್ತು ಶೀಲವಂತ ರ ವಿವಾಹ ನೆರವೇರಿಸಿದರು ಇದು ಸಾಮಾಜಿಕ ಬದಲಾವಣೆಗೆ ಮೊದಲ ಪ್ರಯತ್ನ ಎಂದರು.
ಹೀಗಾಗಿ ಬಸವಣ್ಣ ಅವರ ತತ್ವ ಆದರ್ಶ ಪಾಲನೆ, ಬಸವನಿಗೆ ಸಲ್ಲಿಸುವ ಗೌರವ. ಅವರು ಒಂದು ಜಾತಿಗೆ ಸೀಮಿತ ಅಲ್ಲ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಮೇಘ ಹಡಪದ ಬಸವಣ್ಣನವರ ತತ್ವ ಮತ್ತು ಆದರ್ಶಗಳ ಕುರಿತು ಮಾತನಾಡಿ, ಇಂದಿನ ಸಮಾಜದಲ್ಲಿ ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳದಿದ್ದರೆ ಹೇಗೆ ಸಮಾಜವು ಹಾದಿ ತಪ್ಪಿ ಅರಾಜಕತೆ ಉಂಟುಮಾಡುತ್ತದೆ ಎಂಬುದನ್ನು ವಿವರವಾಗಿ ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಲಕ್ಷ್ಮಣ್ ಬಿ ಬಸವಣ್ಣನವರ ಕುರಿತ ಗೀತೆಗಳನ್ನು ಹಾಡಿದರು. ಹಿರಿಯ ಅಧ್ಯಾಪಕ ಡಾ. ರೆಹಮದ್ ಉಲ್ಲಾ ಅವರು ಮಾತನಾಡಿದರು. ಪ್ರಭಾರ ಪ್ರಾಂಶುಪಾಲ ಡಾ. ವಾಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಖಜಾಂಚಿ ಶ್ರೀಮತಿ ಬೃಂದಾ ಎನ್, ಸಂಚಾಲಕ ಗೋವಿಂದರಾಜು, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೃಂದಾ ಎ, ಅಧ್ಯಾಪಕರು ಅಧ್ಯಾಪಕಿತರರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಸಂಜನಾ ನಿರೂಪಿಸಿದರೆ ಕನ್ನಡ ಸಂಪಾದಕಿ ನವ್ಯಶ್ರೀ ಸ್ವಾಗತಿಸಿದರು ಹಾಗೂ ತೇಜಸ್ವಿನಿ ವಂದಿಸಿದರು.


