Online News in ಕನ್ನಡ

ಚಳಿಗಾಲದ ಅಧಿವೇಶನ ಆರಂಭ : ರಾಜ್ಯದ ಚಿತ್ತ ಕುಂದಾನಗರಿ ಬೆಳಗಾವಿಯತ್ತ…

ಬೆಳಗಾವಿ: ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು ರಾಜ್ಯದ ಜನರ ಚಿತ್ತ ಕುಂದಾನಗರಿ ಬೆಳಗಾವಿಯತ್ತ ಹರಿದಿದೆ. ಆಡಳಿತರೂಢ ಕಾಂಗ್ರೆಸ್‌ ಪಕ್ಷ ಮತ್ತು ವಿಪಕ್ಷ ಬಿಜೆಪಿ ಎರಡೂ ಪಕ್ಷದಲ್ಲಿ ಎಬ್ಬಿರುವ ನಾಯಕತ್ವ ಬದಲಾವಣೆ ಬಿಕ್ಕಟ್ಟಿನ ನಡುವೆ ಉಭಯ ಪಕ್ಷಗಳು ಅಧಿವೇಶನವನ್ನು ಹೇಗೆ ಎದುರಿಸುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ. ಈನಡುವೆ, ಇಂದಿನಿಂದ 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಆಗುವ ಸಾಧ್ಯತೆ ಇದ್ದು, ದ್ವೇಷ ಭಾಷಣ ತಡೆಗೆ ಹೊಸ ಕಾನೂನು, ಸಾಮಾಜಿಕ ಬಹಿಷ್ಕಾವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಎರಡು ವಿಧೇಯಕಗಳೂ ಚರ್ಚೆಗೆ ಬರಲಿದೆ. ಸರಕಾರಿ ಇಲಾಖೆ, ಖಾಸಗಿ ಸಂಸ್ಥೆಗಳಲ್ಲಿ ಹೊರ ಹೊರ ಗುತ್ತಿಗೆ ಸೇವೆಯನ್ನು ರದ್ದುಪಡಿಸುವ ಮಹತ್ವದ ವಿಧೇಯಕವೂ ಸೇರಿದಂತೆ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ, ಗೃಹ ಕೆಲಸಗಾರರ ಸಾಮಾಜಿಕ ಭದ್ರತೆ ಸೇರಿದಂತೆ ಅನೇಕ ಮಹತ್ವ ವಿಧೇಯಕಗಳು ಚರ್ಚೆಗೆ ಬಂದು ಅಂಗೀಕಾರಗೊಳ್ಳಲಿದೆ.
ಈತಮಧ್ಯೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಬೆಳಗಾವಿಯಲ್ಲಿ ವ್ಯಾಪಕ ಪೊಲೀಸ್‌ ಭದ್ರತೆಗಳನ್ನು ಕೈಗೊಳ್ಳಲಾಗಿದೆ. ಇನ್ನು ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದ್ದು, ಸರಕಾರವನ್ನು ಅಣಿಯಲು ಬಿಜೆಪಿ ಮತ್ತು ಜೆಡಿಎಸ್‌ ಜಂಟಿ ತಂತ್ರ ರಚಿಸಿದ್ದಾರೆ.

Call Now Button