Online News in ಕನ್ನಡ

ದುಡಿಯುವ ಕೈಗಳಿಗೆ ಬಲ, ಮದ್ದೂರಿನಲ್ಲಿ 4ನೇ ಕಟ್ಟಡ ಕಾರ್ಮಿಕರ ಸಮ್ಮೇಳನ

ಮದ್ದೂರು, ಆಗಸ್ಟ್ 5 : ಕಟ್ಟಡ ಕಾರ್ಮಿಕರ ತಮ್ಮ ಪಾಲಿನ ಹಕ್ಕುಗಳನ್ನು ಹಾಗೂ ಸೌಲಭ್ಯ ಪಡೆಯಬೇಕಾದರೆ ಸಾಂಘಿಕ ಹೋರಾಟ ಅಗತ್ಯತೆಯಿದೆ ಎಂದು ಸಿ.ಡಬ್ಲ್ಯೂ.ಎಫ್.ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕರೆ ನೀಡಿದರು.
ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ನಾಲ್ಕನೇ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಮಿಕರ ತಮ್ಮಲಿರುವ ಭಿನ್ನಾಭಿಪ್ರಾಯಗಳನ್ನು ಬಿಡಬೇಕು. ಕಾರ್ಮಿಕರ ಸಂಘಟಿತರಾಗುವ ಜತೆಗೆ ನಕಲಿ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಗಸ್ಟ್ 23ಮತ್ತು 24 ರಂದು ಜಿಲ್ಲೆಯಲ್ಲಿ ರಾಜ್ಯಮಟ್ಟದ ಕಾರ್ಮಿಕರ ಸಮ್ಮೇಳನ ಮಾಡುವ ಮೂಲಕ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಸರ್ಕಾರ ದ ಮುಂದೆ ಇಡಲಾಗುವುದು ಎಂದರು.
3 ವರ್ಷಕ್ಕೊಮ್ಮೆ ಕಾರ್ಮಿಕರ ಸಮ್ಮೇಳನಗಳನ್ನು ಮಾಡುವ ಮೂಲಕ ಕಾರ್ಮಿಕರಸಮಸ್ಯೆಗಳನ್ನು ಸರ್ಕಾರ ಕ್ಕೆ ತಿಳಿಸುವ ಕೆಲಸವನ್ನು ಕಾರ್ಮಿಕರಿಗೆ ಸಂಘಟನೆ ಮಾಡುತ್ತಿದೆ. ಕಟ್ಟಡ ಕಾರ್ಮಿಕರಿಗಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಣಿಯಾಗುವ ಮೂಲಕ ಸರ್ಕಾರದ ಸಲವತ್ತುಗಳನ್ನು ಪಡೆದುಕೊಳ್ಳಬೇಕೆಂದರು.
ಕಟ್ಟಡ ಕಾರ್ಮಿಕರಹೋರಾಟ ಫಲವಾಗಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ಮಾಸಿಕ 3 ಸಾವಿರ. ಕುಟುಂಬ ಪಿಂಚಣಿ ಸೌಲಭ್ಯದಿಂದ ಮೃತ ಪಂಚಣಿದಾರರ ಪತಿ ಅಥವಾ ಪತ್ನಿಗೆ ಮಾಸಿಕ 2 ಸಾವಿರ ರೂ, ದುರ್ಬಲತೆ ಪಿಂಚಣಿಯಿಂದ ನೋಂದಾಯಿತ ಫಲಾನುಭವಿಗಳಿಗೆ ಖಾಯಿಲೆಯಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2 ಸಾವಿರ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆ ಆಧರಿಸಿ 2 ಲಕ್ಷ ರೂ ಸಹಾಯಧನ ಸೇರಿದಂತೆ ಹಲವಾರು ಸೌಲಭ್ಯಗಳು ಸರ್ಕಾರದಿಂದ ಕಾರ್ಮಿಕರಿಗೆಸಿಗುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಿ ಮಾತನಾಡಿ, ಕಾರ್ಮಿಕರಲ್ಲಿ ಲಿಂಗ ತಾರತಮ್ಯ ಮತ್ತು ವೇತನ ತಾರತಮ್ಯ ಇರಬಾರದು. ಮಹಿಳಾ ಕಾರ್ಮಿಕರನ್ನು ಗೌರವಿಸುವ ಕೆಲಸದ ಜತೆಗೆ ಕೆಲಸ ಮಾಡುವ ಸ್ಥಳದಲ್ಲಿ ಶೌಚಾಗೃಹದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಎರಡು ಲಕ್ಷದವರೆಗಿನ ಚಿಕಿತ್ಸೆಗೆ ಸಹಾಯಧನ ದೊರೆಯುತ್ತಿದೆ ಆರೋಗ್ಯ ಸಂಜೀವಿನಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು ಎಂದರು.
ಒತ್ತಾಯ: ತಾಲೂಕು 4 ನೇ ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ಶೈಷಣಿಕ ಧನ ಸಹಾಯ ಬಿಡುಗಡೆ, ಆರೋಗ್ಯ ಸಂಜೀವಿನಿ ಜಾರಿಗೆ, ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ 3 ಲಕ್ಷ ರೂ ಧನ ಸಹಾಯ ಬಿಡುಗಡೆ ಹಾಗೂ ಬಾಕಿ ಇರುವ ಮದುವೆ, ವೈದ್ಯಕೀಯ, ಮರಣ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.
ಸಮ್ಮೇಳನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 300 ಕ್ಕೂ ಹೆಚ್ಚು ಕಾರ್ಮಿಕರನ್ನು ಭಾಗವಹಸಿ ಸಮ್ಮೇಳನ ಯಶಸ್ವಿಗೊಳಿಸಿದರು.
ಸಿ.ಡಬ್ಲ್ಯೂ.ಎಫ್.ಐ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಂಜುಳಾ, ತಾಲೂಕು ಕಾರ್ಯದರ್ಶಿ ವಿ.ಶಿವಕುಮಾರ್, ಖಜಾಂಚಿ ಸಿ.ಡಿ.ಆನಂದ್, ಮುಖಂಡರಾದ ಕುಮಾರ್, ಕೆಂಪುಶೆಟ್ಟಿ, ತಿಮ್ಮಶೆಟ್ಟಿ, ಬಸವರಾಜು, ದೊರೆ, ಆರ್ಮುಗಂ ಜಗದೀಶ್, ರಾಮಕೃಷ್ಣ, ರಾಜು, ಸ್ವಾಮಿ, ಪ್ರಭು ಇದ್ದರು. ಮದ್ದೂರು ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ನಾಲ್ಕನೇ ತಾಲೂಕು ಸಮ್ಮೇಳನದಲ್ಲಿ ಸಿ.ಡಬ್ಲ್ಯೂ.ಎಫ್.ಐ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಧ್ವಜಾರೋಹಣ ಮಾಡಿದರು. ಶ್ರೀನಿವಾಸ್, ಮಂಜುಳಾ, ಕುಮಾರಿ, ಶಿವಕುಮಾರ್, ಆನಂದ್, ರಾಜು ಇದ್ದರು.

ಸಮ್ಮೇಳನದಲ್ಲಿ ಹಿರಿಯ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಾಲಕೃಷ್ಣಶೆಟ್ಟಿ, ಶ್ರೀನಿವಾಸ್, ಶಿವಕುಮಾರ್, ಮಂಜುಳ, ಕುಮಾರಿ, ಸತೀಶ್, ಲಕ್ಷ್ಮಣ್ ಇದ್ದರು.

Call Now Button