ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕುದ ರಾಜ್ಯ ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ಹುದ್ದೆಯಿಂದ ಅಮಾನತ್ತು ಪಡಿಸಲಾಗಿದೆ.
ಡಿಪಿಎಆರ್ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ ಅವರು ಈ ಆದೇಶ ಹೊರಡಿಸಿದ್ದು, ಅಮಾನತ್ತಿ ಒಳಗಾಗಿರುವ ರಾಮಚಂದ್ರ ರಾವ್ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ಹೊರಗೆ ಹೋಗುವಂತ್ತಿಲ್ಲ ಎಂದೂ ಸಹ ಸೂಚಿಸಲಾಗಿದೆ. ಮತ್ತು ತನಿಖೆಗೆ ಒಳಪಡಲಿದ್ದಾರೆ.
ನಿನ್ನೆ ಡಾ. ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿಯೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿತ್ತು. ಇದು ಸರಕಾರ ಮತ್ತು ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿತ್ತು


