Online News in ಕನ್ನಡ

ಮಧುಮಲೈ ಹುಲಿ ಅಭಯಾರಣ್ಯದಲ್ಲಿ ಆನೆ ಸಾವು; ಹಲವು ಅನುಮಾನ..!

ನೀಲಗಿರಿ: ಇಲ್ಲಿನ ಮದುಮಲೈ ಹುಲಿ ಅಭಯಾರಣ್ಯದ ತೆಪ್ಪಕಾಡ್‌ ಮಸಿನಗುಡಿ ರಸ್ತೆಯಲ್ಲಿ ಕಾಡು ಆನೆಯೊಂದು ನಿಗೂಢವಾಗಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆನೆಯ ಬಲ ಮೊಣಕಾಲಿನ ಭಾಗದಲ್ಲಿ ಗಾಯವಾಗಿದ್ದು, ಆನೆಯನ್ನು ಹತ್ಯೆ ಮಾಡಿರಬಹುದು ಎನ್ನುವ ಸಂಶಯ ಹುಟ್ಟಿದೆ. ಈ ಬಗ್ಗೆ ಮದುಮಲೈ ಅರಣ್ಯಾಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತ ಗಂಡು ಆನೆಯ ಲದ್ದಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಸೂಕ್ತ ತನಿಖೆ ನಂತರ ಸತ್ಯ ಹೊರಬರಲಿದೆ.

Call Now Button