ಮೈಸೂರು: ಘತನೆವೆತ್ತ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಆತಿಥ್ಯ ವಹಿಸಿದ್ದು ನಮಗೆ ಅಪಾರ ಗೌರವ ಮತ್ತು ಸಂತೋಷದ ಕ್ಷಣವಾಗಿತ್ತು ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಆಯಿಷ್ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅರಮನೆಗೆ ಭೇಟಿ ನೀಡಿ ನಮ್ಮ ಆತಿಥ್ಯ ಸ್ವೀಕರಿಸಿಬೇಕು ಎಂದು ಪ್ರಮೋದಾ ದೇವಿ ಒಡೆಯರ್ ಅವರು ಪತ್ರ ಬರೆದು ವಿನಂತಿ ಮಾಡಿದ್ದರು. ಈ ಆಹ್ವಾನವನ್ನು ಒಪ್ಪಿ ರಾಷ್ಟ್ರಪತಿಗಳು ಇಂದು ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಕೂಡ ಜೊತೆಗಿದ್ದರು.
ಹೀಗಿತ್ತು ಬೆಳಗಿನ ಉಪಹಾರದ ಮೆನು..!
ಭೇಟಿಯ ವೇಳೆ ಅತಿಥಿಗಳಿಗೆ ಬೆಳಗಿನ ಉಪಹಾರದ ಮೆನು… ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ಹಣ್ಣುಗಳು… ಸಾಂಪ್ರದಾಯಿಕ ಮೈಸೂರು ಭಕ್ಷ್ಯಗಳಾದ , ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾ ಸೇರಿದ್ದು ಇವುಗಳ ಜೊತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್, ಚಹಾ ಮತ್ತು ಕಾಫಿ. ಇವೆಲ್ಲವನ್ನೂ ಗೌರವಾನ್ವಿತ ರಾಷ್ಟ್ರಪತಿಗಳ ಆಹಾರ ಆದ್ಯತೆಗಳಿಗೆ ಅನುಗುಣವಾಗಿ ತಯಾರಿಸಲಾಗಿತ್ತು.




ಅರಮನೆ ವೀಕ್ಷಿಸಿದ ರಾಷ್ಟ್ರಪತಿಗಳು
ಭೇಟಿಯ ವೇಳೆ ರಾಜ ಪರಿವಾರದೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ ನಂತರ ರಾಷ್ಟ್ರಪತಿಗಳು ಅರಮನೆಯ ಪ್ರಮುಖ ಭಾಗಗಳನ್ನು ವೀಕ್ಷಿಸಿ ಆನಂದಪಟ್ಟಿದ್ದಾರೆ. ಅರಮನೆಯ ಸೌಂದರ್ಯ, ಮೈಸೂರು ಸಂಸ್ಥಾನದ ಕೊಡುಗೆಗಳು, ಮುಂದೆ ನಡೆಯಲಿರುವ ದಸರಾ ಆರಚಣೆ, ಅದರ ಮಹತ್ವದ ಬಗ್ಗೆ ಈ ವೇಳೆ ವಿಚಾರಿಸಿ ತಿಳಿದುಕೊಂಡಿದ್ದಾರೆ.
ಭೇಟಿಯ ವೇಳೆ ಸಂಸದರಾದ ಯದುವೀರ್ ಮತ್ತು ಅವರ ಪತ್ನಿ, ಪ್ರಮೋದಾ ದೇವಿ ಒಡೆಯರ್, ಅಧಿಕಾರಿಗಳು ಜೊತೆಗಿದ್ದರು. ಇನ್ನು ಭೇಟಿಯಿಂದ ನಮಗೆ ಅಪಾರ ಗೌರವ ಮತ್ತು ಸಂತೋಷ ಉಂಟಾಗಿದೆ ಎಂದು ಪ್ರಮೋದಾ ದೇವಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


