ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ದುರಂತ ಸಾವು ಕಂಡಿದ್ದಾರೆ. ಇವರೊಂದಿಗೆ ಇನ್ನು ನಾಲ್ವರು ದುರ್ಮರಣ ಹೊಂದಿದ್ದು ಘಟನೆಗೆ ಮಹಾರಾಷ್ಟ್ರ ತಲ್ಲಣಗೊಂಡಿದೆ.
ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.
ಮುಂಬೈನಿಂದ ಬಾರಾಮತಿಗೆ ವಿಮಾನ ತೆರಳುತ್ತಿದ್ದ ಏರ್ಕ್ರಾಫ್ಟ್ ಲ್ಯಾಂಡಿಂಗ್ ಆಗುವ ವೇಳೆ ಬಾರಾಮತಿಯ ಹೊಲದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಈ ದುರ್ಘಟನೆ ಬೆಳಗ್ಗೆ 8.30ರಲ್ಲಿ ಸಂಭವಿಸಿದ್ದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನದಲ್ಲಿ ಇನ್ನೂ 2 ಸಿಬ್ಬಂದಿ (1 ಪಿಎಸ್ಒ ಮತ್ತು 1 ಅಟೆಂಡೆಂಟ್) ಮತ್ತು 2 ಸಿಬ್ಬಂದಿ (ಪಿಐಸಿ+ಎಫ್ಒ) ಸದಸ್ಯರೊಂದಿಗೆ ಇದ್ದರು. ಈ ಘಟನೆ ಕಾಡ್ಗಿಚ್ಚಿನಂತೆ ಹರಡಿದ್ದು ಮಹಾರಾಷ್ಟ್ರ ತಲ್ಲಣಗೊಂಡಿದೆ.
ವಿಮಾನ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಅಧಿಕಾರಿಗಳಿಂದ ತನಿಖೆ ಆರಂಭಗೊಂಡಿದೆ.


