Online News in ಕನ್ನಡ

ಭಾರತದ ಸಂವಿಧಾನ ಬಡವರ ರಕ್ಷಣಾ ಗುರಾಣಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನವ ದೆಹಲಿ: `ಭಾರತದ ಸಂವಿಧಾನ ಬಡವರ `ರಕ್ಷಣಾ ಗುರಾಣಿ’. ಅದರ ಮೇಲೆ ಯಾವುದೇ ದಾಳಿಗೆ ಅವಕಾಶ ನೀಡುವುದಿಲ್ಲ ಎಂದು ದೇಶದ ಜನ ಪ್ರತಿಜ್ಞೆ ಮಾಡಬೇಕು. ಅಂತಹ ಯಾವುದೇ ದಾಳಿಯ ವಿರುದ್ಧ ಎದ್ದು ನಿಲ್ಲುವ ಮೊದಲಿಗ ನಾನೇ’. ಹೀಗೆ ದೇಶದ ಜನರಿಗೆ ಕರೆ ನೀಡಿದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಸಂವಿಧಾನ ದಿನದಂದು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು ` ಭಾರತದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಇದು ದೇಶದ ಪ್ರತಿಯೊಬ್ಬ ನಾಗರಿಕರಿಗೂ ನೀಡಿದ ಪವಿತ್ರ ವಾಗ್ದಾನವಾಗಿದೆ. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಾಗಿರಲಿ, ಯಾವುದೇ ಪ್ರದೇಶದಿಂದ ಬಂದವರಾಗಿರಲಿ, ಯಾವುದೇ ಭಾಷೆಯನನ್ನು ಮಾತನಾಡುವವರಾಗಿರಲಿ, ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲರಿಗೂ ಸಮಾನತೆ, ಗೌರವ ಮತ್ತು ನ್ಯಾಯ ಸಿಗುತ್ತದೆ ಎಂಬ ಭರವಸೆ, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದಿದ್ದಾರೆ.

Call Now Button