ಚಾಮರಾಜನಗರ-ವಾರ್ತಾ ಇಲಾಖೆಯ ಸಹ ಯೋಗದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತು 5 ದಿನಗಳ ಕಲಾ ಜಾಥಾಗೆ ಚಾಲನೆ ನೀಡಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬೀದಿ ನಾಟಕ, ಎಲ್‍ಇಡಿ ಪ್ರದರ್ಶನದ ಮೂಲಕ ಜನರಿಗೆ ಜಾಗೃತಿ ಮೂಡಿಸ ಲಾಗುತ್ತದೆ. ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗ ಳಿಗೂ ತಲುಪಬೇಕು. ಜನರು ಇದನ್ನು ಸದುಪಯೋ ಗಪಡಿಸಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ವಿಚಾರದಲ್ಲಿ ಜಿಲ್ಲೆಯು ಯಶಸ್ವಿಯಾಗಿ ನಡೆಯುತ್ತಿದ್ದು ಮುಂಚೂ ಣಿಯಲ್ಲಿದೆ. ಇದರಲ್ಲಿ ಇಲಾಖಾ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರ ಶ್ರಮವಿದೆ ಎಂದು ತಿಳಿಸಿದರು.
ಕಲಾ ಜಾಥಾವು ಪ್ರತಿ ದಿನ 4 ಗ್ರಾಮಗಳಂತೆ 5 ದಿನಗಳಲ್ಲಿ 20 ಗ್ರಾಮಗಳಿಗೆ ಸಂಚರಿಸಿ ಅರಿವು ಮೂಡಿಸಲಿದೆ. ಈ ಸಂದರ್ಭದಲ್ಲಿ ಜಿಪಂ ಸಿಇಒ ಮೋನಾ ರೋತ್, ಎಡಿಸಿ ಜವರೇಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಸೋಮೇಶ್ವರ, ಸದಸ್ಯರಾದ ಕುಮಾರಸ್ವಾಮಿ, ಕುಮಾರ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್ ಸೇರಿದಂತೆ ಇತರರಿದ್ದರು.
ವಿಕಾ ಸುದ್ದಿ


