Online News in ಕನ್ನಡ

ನಟ ಪ್ರಕಾಶ್‌ ರಾಜ್‌ ಸೇರಿದಂತೆ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು: 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಬಹುಭಾಷಾ ನಟ ಪ್ರಕಾಶ್​ ರಾಜ್​ ಸೇರಿದಂತೆ ಒಟ್ಟು 70 ಜನ ಸಾಧಕಕರನ್ನ ಆಯ್ಕೆ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಇಂದು (ಅಕ್ಟೋಬರ್ 30) ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟಿಸಿದ್ದು, ಇದೇ ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌

ಇದರಲ್ಲಿ ಮೈಸೂರಿನ 7 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮಾಧ್ಯಮ ಕ್ಷೇತ್ರದ ಅಂಶಿ ಪ್ರಸನ್ನ ಕುಮಾರ್‌, ಜಾನಪದ ಕ್ಷೇತ್ರದ ಮಹದೇವಪ್ಪ ಉಡಿಗಾಲ, ನೃತ್ಯ ಕ್ಷೇತ್ರದಿಂದ ಕೆ. ರಾಮಮೂರ್ತಿ ರಾವ್‌, ಕ್ರೀಡಾ ಕ್ಷೇತ್ರದಿಂದ ಎಂ. ಯೋಗೇಂದ್ರ, ಕರಕುಶಲ ಕ್ಷೇತ್ರದಿಂದ ಎಲ್‌. ಹೇಮಾಶೇಖರ್‌ ಅವರಿಗೆ ಪ್ರಶಸ್ತಿ ಸಿಕ್ಕಿದೆ.

Call Now Button