Online News in ಕನ್ನಡ

ಕೇರಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಭರ್ಜರಿ ಜಯ

ಕೇರಳಾ: ಕೇರಳಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಒಕ್ಕೂಟ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಬಹುಮತದತ್ತ ಸಾಗಿದೆ. 140 ವಿಧಾನಸಭಾ ಕ್ಷೇತ್ರಗಳ ಪೈಕಿ ಹತ್ತಿರತ್ತಿರ 100 ಸ್ಥಾನಗಳಲ್ಲಿ ಯುಡಿಎಫ್‌ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತ ರೂಡ ಎಲ್‌ಡಿಎಫ್‌ 39 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ವಿಶೇಷವೆಂದರೆ, ಕೇರಳಾದ ಮುಖ್ಯಮಂತ್ರಿ, ಎಲ್‌ಡಿಎಫ್‌ ಅಭ್ಯರ್ಥಿ ಪಿನಿರಾಯಿ ವಿಜಯನ್‌ ಸೋಲು ಕಂಡಿದ್ದಾರೆ. ಇಲ್ಲಿ ಎನ್‌ಡಿಎ ಮೈತ್ರಿಕೂಟ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳುತ್ತಿದ್ದಂತೆಯೇ ಮತ ಪತ್ರಗಳ ಎಣಿಕೆಯಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಸಮಬಲ ಕಾಯ್ದುಕೊಂಡರೂ, ತದನಂತರದ ಮತ ಎಣಿಕೆಯಲ್ಲಿ  ಯುಡಿಎಫ್‌ ಅಭ್ಯರ್ಥಿಗಳು ಸತತ ಮುನ್ನಡೆ ಕಾಯ್ದುಕೊಂಡರು. ಒಂದೆಡೆ ಕಾಂಗ್ರೆಸ್‌ ಮೈತ್ರಿಗೆ ಗೆಲುವು ಮತ್ತೊಂದೆಡೆ ಎಲ್‌ಡಿಎಫ್‌ ನಾಯಕ , ಮುಖ್ಯಮಂತ್ರಿ ಪಿನಿರಾಯಿ ವಿಜಯನ್‌ ಸೋಲು ಕಾಂಗ್ರೆಸ್‌ ಪಾಳಯದಲ್ಲಿ ಸಂಭ್ರಮಾಚರಣೆಯನ್ನು ದುಪ್ಪಟ್ಟುಗೊಳಿಸಿದೆ.

Call Now Button