ಚೆನ್ನೈ: ʻಒಬ್ಬ ನಾಯಕನಿಗೆ ಇರಬೇಕಾದ ಆತ್ಮವಿಶ್ವಾಸ ಆತನಿಗೆ ಇತ್ತು. ಆ ಆತ್ಮವಿಶ್ವಾಸವೇ ಇಂದು ಅವನಿಗೆ ಗೆಲುವು ತಂದುಕೊಟ್ಟಿದೆ. ತಮಿಳರ ಸೇವೆ ಮಾಡಬೇಕೆಂಬ ಆತನ ಕನಸ್ಸು ನನಸ್ಸಾಗಿದೆʼ.
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಭಾರತದ ಖ್ಯಾತ ನಟ ʻದಳಪತಿʼ ವಿಜಯ್ ನೇತೃತ್ವದ ತಮಿಳಗ ವೆಟ್ರಿ (ಟಿವಿಕೆ) ಪಕ್ವು ಅಭೂತಪೂರ್ವ ಮುನ್ನಡೆ ಸಾಧಿಸಿ ಅಧಿಕಾರದದತ್ತ ಸಾಗುತ್ತಿರುವ ಬೆನ್ನ ಹಿಂದೆಯೇ ತಂದೆ ಎಸ್. ಎ. ಚಂದ್ರಶೇಖರ್ ಅವರು ಖಾಸಗಿ ವಾಹಿನಿಯೊಂದಿಗೆ ಮಾತನಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಒಬ್ಬ ವ್ಯಕ್ತಿ ಕೇವಲ ನಟನಾಗಿ ಇರಲು ಸಾಧ್ಯವಿಲ್ಲ. ಅವನಿಗೆ ಸಾಮಾಜಿಕ ಕಳಕಳಿ ಇರಬೇಕು. ಈ ಗುಣವನ್ನು ನನ್ನ ಮಗ ಬೆಳೆಸಿಕೊಂಡು ಬಂದಿದ್ದಾನೆ. ಕಳೆದ 30 ವರ್ಷಗಳಿಂದ ಜನ ಸೇವೆಯ ಕನಸ್ಸು ಹೊತ್ತು ಸಾಗಿದ್ದಾನೆ.
ವಿಶೇಷವೆಂದರೆ, ನನ್ನ ಮಗನ ಆತ್ಮವಿಶ್ವಾಸ ಮೆಚ್ಚಲೇ ಬೇಕು. ಮೊದಲ ಬಾರಿಗೆ ಪಕ್ಷವನ್ನು ಕಟ್ಟಿ, ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ, ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದಾನೆ. ಒಬ್ಬ ನಾಯಕನಾದವನಿಗೆ ಈ ಆತ್ಮವಿಶ್ವಾಸ ಇರಬೇಕು ಎಂದರು.
ಒಬ್ಬ ನಟನಾಗಿ ತಮಿಳು ಜನರ ಸೇವೆ ಮಾಡಬೇಕೆಂದು ಅವನು ಕಂಡ ಕನಸ್ಸು ನನಸ್ಸಾಗಿದೆ. ಇಂದು ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತಿದ್ದಾನೆ. ಇದನ್ನು ಹೇಗೆ ಸಂಭ್ರಮಿಸಬೇಕು ಗೊತ್ತಾಗುತ್ತಿಲ್ಲ ಎಂದರು.
ಈನಡುವೆ, ಫಲಿತಾಂಶಗಳು ಹೊರ ಬೀಳುತ್ತಿದ್ದಂತೆಯೇ ಚಿನ್ನೈನಲ್ಲಿರುವ ವಿಜಯ್ ಅವರ ನಿವಾಸದಲ್ಲಿ ತಂದೆ ತಾಯಿ ಮತ್ತು ಬಂಧುಗಳು ಟಿವಿಯ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.


