Online News in ಕನ್ನಡ

ಮೈಸೂರಿನ KSOUಗೆ ಮತ್ತೊಂದು ರಾಷ್ಟ್ರೀಯ ಮಟ್ಟದ ಗರಿ

ನವದೆಹಲಿ: ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್‌ ರ್ಯಾಕಿಂಗ್‌ ಪ್ರೇಮ್‌ ವರ್ಕ್‌ ನೀಡುವ ರ್ಯಾಂಕ್‌ ನಲ್ಲಿ ಮೈಸೂರಿನಲ್ಲಿ ಪ್ರಧಾನ ಕೇಂದ್ರ ಹೊಂದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು) ಗೆ ಎರಡನೇ ರ್ಯಾಂಕ್‌ ಲಭಿಸಿದೆ.

ರಾಷ್ಟ್ರೀಯ ಸಾಂಸ್ಥಿಕ ಚೌಕಟ್ಟಿನಲ್ಲಿ ಕೆಎಸ್‌ಒಯು ಈ ಶ್ರೇಯಾಂಕ ಗಳಿಸಿದ್ದು, ಉತ್ತಮ ಶೈಕ್ಷಣಿಕ ಪರಿಸರ, ವಿವಿಧ ಬಗೆಯ ಕೋರ್ಸ್‌ಗಳು ಸೇರಿ ಹಲವು ಅಂಶಗಳನ್ನು ಆಧರಿಸಿ ಈ ಶ್ರೇಯಾಂಕ ನೀಡಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಪ್ರಶಸ್ತಿ ಸ್ವೀಕರಿಸಿದರು. ಕುಲಸಚಿವ ಪ್ರೊ. ಎಸ್‌.ಕೆ ನವೀನ್‌ ಕುಮಾರ್‌, CIQA (ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರ)ದ ನಿರ್ದೇಶಕ ಪ್ರೊ. ನಿರಂಜನ್‌ ರಾಜ್‌ ಎಸ್‌.ಹಾಜರಿದ್ದರು.

Call Now Button