ಮೈಸೂರು: ನಗರದಲ್ಲಿ ರೌಡಿಶೀಟರ್ ಗಿಲ್ಕಿ ಕೊಲೆ ಮತ್ತು ಪುಟ್ಟ ಬಾಲಕಿಯ ಹತ್ಯೆಯ ಬಳಿಕ ನಗರ ಪೊಲೀಸರು ಬಿಗಿ ಬಂದೋಬಸ್ತ್ ಗೆ ಹೆಚ್ಚಿನ ಗಮನ ನೀಡಿದ್ದಾರೆ.
ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನಿರ್ದೇಶನದ ಮೇರೆಗೆ ಉಪ ಪೊಲೀಸ್ ಆಯುಕ್ತೆ ಬಿಂದುಮಣಿ, ಸುಂದರ್ ರಾಜ್ ಅವರು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳನ್ನು ಠಾಣೆಗೆ ಕರಿಯಿಸಿ ಡ್ರಿಲ್ ಮಾಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಸಾರ್ವಜನಿಕರಲ್ಲಿ ಹೆದರಿಕೆ ಹುಟ್ಟಿಸುವಂತ ಯಾವುದೇ ಕೆಲಸಗಳನ್ನು ಮಾಡಿದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನುಬಾಹಿರ ಪೋಸ್ಟ್ ಹಾಗೂ ರೀಲ್ಸ್ ಗಳನ್ನು ಹಾಕಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.


