Online News in ಕನ್ನಡ

ನನ್ನ ಡಿಕೆಶಿ ನಡುವೆ ಗೊಂದಲ ಇಲ್ಲ, ಒಟ್ಟಾಗಿ 2028ರ ಚುನಾವಣೆ ಎದುರಿಸುತ್ತೆವೆ: ಸಿಎಂ ಡಿಸಿಎಂ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಘೋಷಣೆ

ಬೆಂಗಳೂರು: ‘ ನನ್ನ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂದೆಯೂ ಇರಲ್ಲ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಲು ಒಟ್ಟಿಗೆ ಕೆಲಸ ಮಾಡ್ತೀವಿ. ನಾವಿಬ್ಬರೂ ಹೈ ಕಮಾಂಡ್ ನೀಡುವ ಸೂಚನೆಯಂತೆ ನಡೆದುಕೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಉಲ್ಬಣಿಸಿದ್ದ ಗೊಂದಲಕ್ಕೆ ತೆರೆಯೆಳೆದಿದ್ದಾರೆ.
ಶನಿವಾರ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಉಪಹಾರ ಚರ್ಚೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ನಿಜ. ಅದನ್ನು ನಾವಿಬ್ಬರೂ ಕುಳಿತು ಚರ್ಚೆ ಮಾಡಿದ್ದೆ. ಕೆಲ ಗೊಂದಲವನ್ನು ಮಾಧ್ಯಮಗಳೂ ಸೃಷ್ಟಿ ಮಾಡಿದ್ದವು. ಆದರೆ, ಇನ್ನು ಮುಂದೆ ಯಾವುದೇ ಗೊಂದಲ ಇರುವುದಿಲ್ಲ. ಡಿಸೆಂಬರ್ ನಲ್ಲಿ ನಡೆಯುವ ಅಧಿವೇಶನವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ನುಡಿದರು.
ಕೆಲವು ಶಾಸಕರು ದೆಹಲಿಗೆ ತೆರಳಿದ ಬಗ್ಗೆ ಕೇಳಿದ ಪ್ರಶ್ನೆಗೆ, ಸಚಿರ ಸಂಪುಟ ವಿಸ್ತರಣೆ ಆಗಲಿದೆ ಎಂಬ ಕಾರಣಕ್ಕೆ ಹೋಗಿರಬಹುದು. ಅವರಾರೂ ಸರಕಾರದ ವಿರುದ್ಧ ಇಲ್ಲ. ನಾನೂ ಕೆಲವರೊಂದಿಗೆ ಮಾತನಾಡಿದ್ದೇನೆ ಎಂದು ಉತ್ತರಿಸಿದರು.
ಸರಕಾರದ ವಿರುದ್ಧ ಸುಳ್ಳು ಅಪಪ್ರಚಾರ ಮಾಡುವುದು ಬಿಜೆಪಿ ಜೆಡಿಎಸ್ ನಾಯಕರ ಚಾಳಿಯಾಗಿದೆ. ಅಧಿವೇಶನದಲ್ಲಿ ಎರಡೂ ಪಕ್ಷವನ್ನು ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.
‘ ಕೊಟ್ಟಮಾತು’ ವಿಷಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದ ಏನದು ಕೊಟ್ಟಮಾತು ? ಎಲ್ಲ ಹೈಕಮಾಂಡ್ ಹೇಳಿದಂತೆ ಇಬ್ಬರೂ ಕೇಳುತ್ತೀವಿ ಎಂದು ನುಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳ ಎಲ್ಲ ಮಾತಿಗೂ ನಮ್ಮ ಸಹಮತ ಇದೆ. ನಾವಿಬ್ಬರೂ ಒಟ್ಟಾಗಿ ಹೋಗ್ತೀವಿ ಎಂದು ತಿಳಿಸಿದರು.

ನಮ್ಮಲ್ಲಿ ಯಾವುದೇ ಗುಂಪು ಇಲ್ಲ‌. ಕೃಷ್ಣ ಅವರ ಕಾಲದಲ್ಲೂ ಗುಂಪಿಗೆ ಅವಕಾಶ ಕೊಡಲ್ಲ. ನಮ್ಮದು ಒಂದೇ ಗುಂಪು ಅದು ಕಾಂಗ್ರೆಸ್‌ ಗುಂಪು. ನಮ್ಮ ಶಾಸಕರನ್ನು ಇನ್ನಷ್ಟು ಗಟ್ಟಿ ಮಾಡುತ್ತೇವೆ . ಮುಂದೆ ಹೈಕಮಾಂಡ್ ಹೇಳಿದಂತೆ ಇಬ್ಬರೂ ಕೇಳುತ್ತೇವೆ ಎಂದು ತಿಳಿಸಿದರು.

Call Now Button