ವಾಷಿಂಗ್ಟನ್: 2025ರ ನೊಬೆಲ್ ಶಾಂತಿ ಪ್ರಶಸ್ತಿಗೆ ವೆನೆಜುವೆಲಾದ ವಿಪಕ್ಷ ನಾಯಕಿ ಮರಿಯಾ ಮಚಾಡೋ ಅವರು ಭಾಜನರಾಗಿದ್ದಾರೆ.
ವಿಶ್ವದ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿರುವ ನೊಬೆಲ್ ಶಾಂತಿ ಪ್ರಶಸ್ತಿಯು ಈ ಬಾರಿ ಮರಿಯಾ ಕೊರಿನಾ ಮಚಾಡೋ ಅವರಿಗೆ ಸಂದಿದೆ. ಮರಿಯಾ ಕೊರಿನಾ ಮಚಾಡೊ ಅವರು ವೆನಿಜುವೆಲಾದ ವಿಪಕ್ಷ ನಾಯಕಿಯಾಗಿದ್ದಾರೆ. 2025ನೇ ಸಾಲಿನ ಶಾಂತಿ ನೊಬೆಲ್ ಪ್ರಶಸ್ತಿಯಲ್ಲಿ ಭಾರೀ ಪೈಪೋಟಿ ಇತ್ತು. ಮುಖ್ಯವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನು ವಿಶ್ವದಾದ್ಯಂತ ಭಾರತ – ಅಮೆರಿಕಾ ಸೇರಿದಂತೆ ಏಳು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹೀಗಾಗಿ ನನಗೇ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಹೇಳಿಕೊಂಡು ಬರುತ್ತಿದ್ದರು. ಇದೀಗ ವೆನಿಜುವೆಲಾದ ಮಹಿಳಾ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ 2025 ರ ನೊಬೆಲ್ ಪ್ರಶಸ್ತಿ ಸಂದಿದೆ.


