Online News in ಕನ್ನಡ

ಬಹುರೂಪಿಯಲ್ಲಿ ʻರೂಪಾಂತರʼ ನಾಟಕ ವೀಕ್ಷಿಸಿದ ಪಂಚಭಾಷಾ ನಟ ಪ್ರಕಾಶ್‌ ರಾಜ್ & ಕುಟುಂಬ

ಮೈಸೂರು: ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ಪ್ರರ್ದಶನ ಕಂಡ ʻರೂಪಾಂತರʼ ನಾಟಕವನ್ನು ಪಂಚಭಾಷಾ ನಟ ಪ್ರಕಾಶ್‌ ರಾಜ್‌ ಅವರು ಕುಟುಂಬ ಸಮೇತರಾಗಿ ವೀಕ್ಷಿಸಿದರು.


ರೂಪಾಂತರ ನಾಟಕವು ಶಾಲಾ ರಂಗ ವಿಕಾಸ ಯೋಜನೆಯಡಿ ತಯಾರಾದ ನಾಟಕವಾಗಿದ್ದು, ಕಲಿಯುವ ಮನೆ ಶಾಲೆಯ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟು, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬಾದಲ್‌ ಸರ್ಕಾರ್‌ ಅವರ ನಾಟಕದ ರೂಪಾಂತರವಾಗಿದ್ದು ಸಮತೆಯ ಸಂದೇಶವನ್ನು ಸಾರುತ್ತಿದೆ.


ಇಂದು ಸಂಜೆ ಕಲಾಮಂದಿರಕ್ಕೆ ಆಗಮಿಸಿದ ನಟ ಪ್ರಕಾಶ್‌ ರಾಜ್‌ , ಪತ್ನಿ ಪೋನಿ ವರ್ಮ ಮತ್ತು ಪುತ್ರನ ಜತೆ ಮಕ್ಕಳ ನಡುವೆ ಕುಳಿತು ನಾಟಕ ವೀಕ್ಷಿಸಿದರು.

Call Now Button