Online News in ಕನ್ನಡ

ತೇಜಸ್ವಿ ನೆನಪಿನಲ್ಲಿ ಕರ್ವಾಲೋ-50; ಮತ್ತೆ ಮತ್ತೆ ಅರಳಿದ ಚಿಂತನೆಗಳು…

ಮೈಸೂರು: ಇಲ್ಲಿನ ಕಿರುರಂಗಮಂದಿರದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಕರ್ವಾಲೊ – 50: ತೇಜಸ್ವಿ ಮತ್ತು ಪರಿಸರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿರುಚಿ ಪ್ರಕಾಶನ, ಮೈಸೂರು ಪುಸ್ತಕ ಪ್ರಕಾಶನ ಹಾಗೂ ಮೈಸೂರು ಅಮಲು ಅವರ ಸಹಯೋಗದಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಮತ್ತು ನಿರಂತರ ಫೌಂಡೇಷನ್ ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು

ಬೆಳಿಗ್ಗೆ 10 ಗಂಟೆಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಚಿಂತನೆಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯನ್ನು ಖ್ಯಾತ ವಿಮರ್ಶಕರು ಮತ್ತು ಬರಹಗಾರರಾದ ಪ್ರೊ. ರಾಜೇಂದ್ರ ಚೆನ್ನಿ (ಶಿವಮೊಗ್ಗ) ಅವರು ನಿರ್ವಹಿಸಿ, ತೇಜಸ್ವಿಯ ಸಾಹಿತ್ಯ, ಪರಿಸರ ಚಿಂತನೆ ಮತ್ತು ಅವರ ಜೀವನ ತತ್ವಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು.

ಅದಾದ ನಂತರ, ಕಡಿದಾಳ್ ಪ್ರಕಾಶ್ (ಸಮಕಾರ್ಯದರ್ಶಿ, ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ) ಅವರು ಕೃಷಿ, ಹೋರಾಟ, ಛಾಯಾಗ್ರಾಹಣ ಮತ್ತು ಪರಿಸರ ಎಂಬ ವಿಷಯವಾಗಿ ತೇಜಸ್ವಿಯ ಜೀವನದ ವಿವಿಧ ಆಯಾಮಗಳನ್ನು ಚರ್ಚಿಸಿದರು.

ಎಂ.ವಿ. ಕೃಷ್ಣ (ಕೃಷಿಕರು, ಮಳವಳ್ಳಿ) ಅವರು “ತೇಜಸ್ವಿ ಅವರ ಒಡನಾಟ” ಕುರಿತು ತಮ್ಮ ಆತ್ಮೀಯ ಅನುಭವಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮವನ್ನು ಶ್ರೀ ರಾಘವೇಂದ್ರ ಪುಸ್ತಕ ಮುದ್ರಣಾಲಯ, ಮೂಡಿಗೆರೆ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

“ಕರ್ವಾಲೊ – 50” ಕಾರ್ಯಕ್ರಮದ ಅಂಗವಾಗಿ ತೇಜಸ್ವಿ ಅವರ ಪರಿಸರ ಚಿಂತನೆ, ರೈತ ಹೋರಾಟ, ಹಾಗೂ ಅವರ ಸೃಜನಶೀಲತೆ ಕುರಿತಾದ ಚರ್ಚೆಗಳು ಭಾಗವಹಿಸಿದ ಎಲ್ಲರಿಗೂ ಪ್ರೇರಣಾದಾಯಕವಾಗಿತ್ತು.

Call Now Button