Online News in ಕನ್ನಡ

ಪ್ರೇಮಿಗಳ ದಿನಾಚರಣೆ: ನಂದಿಬೆಟ್ಟಕ್ಕೆ ಪ್ರವೇಶ ನಿಷೇಧ

ಚಿಕ್ಕಬಳ್ಳಾಪುರ: ಸಾಮಾನ್ಯ ವಾರಾಂತ್ಯದ ದಿನಗಳಲ್ಲಿ ವಾಹನ ಮತ್ತು ಜನರ ದಟ್ಟಣೆ ಹೆಚ್ಚಾಗಿದ್ದು, ಇನ್ನು ವೀಕ್‌ಎಂಡ್‌ಗೆ ಬಂದಿರುವ ವಿಶ್ವ ಪ್ರೇಮಿಗಳ ದಿನದಂದು (ಫೆ.14) ನಂದಿಬೆಟ್ಟದಲ್ಲಿ ಪ್ರೇಮಿಗಳ ವಿಹಾರಕ್ಕೆ ಬ್ರೇಕ್‌ ಬಿದ್ದಿದೆ. ಈ ಹಿಂದೆ ನಂದಿ ಹಿಲ್ಸ್‌ನಲ್ಲಿ ಪ್ರೇಮಿಗಳ ದಿನದಂದು ಆತ್ಮಹತ್ಯೆ ಪ್ರಕರಣಗಳು ನಡೆದಿರುವುದನ್ನು ಮನಗಂಡು ಈ ನಿರ್ಧಾನ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಉಪ ಆಯುಕ್ತ ಜಿ. ಪ್ರಭು ತಿಳಿಸಿದ್ದಾರೆ.


ಈ ಬಾರಿ ಶನಿವಾರದಂದು ಪ್ರೇಮಿಗಳ ದಿನ ಬಂದಿರುವುದರಿಂದ ಒಂದಡೆ ವೀಕ್‌ಎಂಡ್‌ ಪ್ರವಾಸಿಗರ ದಟ್ಟಣೆ ಮತ್ತು ಪ್ರೇಮಿಗಳ ದಿನಾಚರಣೆ ಅಂಗವಾಗಿ ಪ್ರೇಮಿಗಳ ಭೇಟಿ ಎರಡನ್ನೂ ಪರಿಗಣಿಸಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಮಾನ್ಯವಾಗಿ ಹೊಸ ವರ್ಷದ ದಿನ ಒಂದನ್ನು ಬಿಟ್ಟು ವರ್ಷದ ಎಲ್ಲ ದಿನಗೂ ನಂದಿ ಬೆಟ್ಟಕ್ಕೆ ಪ್ರವೇಶಾವಕಾಶವಿತ್ತು. ಸಾಮಾನ್ಯ ವಾರಾಂತ್ಯಗಳಲ್ಲಿ ಸುಮಾರು 18,000 ಪ್ರವಾಸಿಗರು, 3,500 ದ್ವಿಚಕ್ರ ವಾಹನಗಳು, 1,700 ನಾಲ್ಕು ಚಕ್ರ ವಾಹನಗಳು ಬರುತ್ತವೆ. ಒಂದೇ ಒಂದು ಸಂಪರ್ಕ ರಸ್ತೆ ಇರುವುದರಿಂದ, ವಾರಾಂತ್ಯಗಳಲ್ಲಿ ಹೆಚ್ಚುವರಿ ಪೊಲೀಸರನ್ನು ಈಗಾಗಲೇ ನಿಯೋಜಿಸಲಾಗಿದೆ.

Call Now Button