ಮೈಸೂರು (ಪಿರಿಯಾಪಟ್ಟಣ): ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ಮರಟಿಕೊಪ್ಪಲು ಗ್ರಾಮದ ರೈತನೊಬ್ಬ ತನಗೆ ಸೇರಿದ 1.10 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ರೋಟವೇಟರ್ ನಿಂದ ನಾಶ ಪಡಿಸಿದ್ದಾರೆ ಎಂದು ಆರೋಪಿಸಿ ಮನನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲ್ಲೂಕಿನ ಮರಟಿಕೊಪ್ಪಲು ಗ್ರಾಮದ ರೈತ ಮಂಜು ಎಂಬುವವರೆ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ರೈತ ಎಂದು ತಿಳಿದು ಬಂದಿದೆ. ಇವರಿಗೆ ಚನ್ನಕಲ್ ಕಾವಲ್ ಗ್ರಾಮದ ಸರ್ವೆ ನಂಬರ್ 61 ಹಾಗೂ 62 ರಲ್ಲಿ 1.10 ಗುಂಟೆ ಜಮೀನು ಇದ್ದು, ಈ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆದಿದ್ದು, ಅದೇ ಗ್ರಾಮದ ಕುಮಾರ್ ಅವರ ಪತ್ನಿ ರೇಣುಕಮ್ಮ ಅವರ ಮಕ್ಕಳಾದ ಭಾಸ್ಕರ್ ಹಾಗೂ ಶ್ರೀನಿವಾಸ್ ಎಂಬುವವರು ತಮ್ಮ ಜಮೀನನ್ನು ಅಕ್ರಮವಾಗಿ ಬರೆಸಿಕೊಂಡಿದ್ದರು ಇದರ ವಿರುದ್ಧ ನಾನು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಹಂತದಲ್ಲಿದೆ, ಹೀಗಿರುವಾಗ ಇವರು ಏಪ್ರಿಲ್ 25 ರ ಸೋಮವಾರ ರಾತ್ರಿ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ರೊಟವೇಟರ್ ಬಳಸಿ ಉಲುಸಾಗಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ನಾಶ ಪಡಿಸಿದ್ದು, ಇದರ ಬಗ್ಗೆ ಕೇಳಲು ಹೋದ ಸಂದರ್ಭದಲ್ಲಿ ತನಗೆ ಮಾನಹಾನಿ ಮಾಡಿ ನಿಂದನೆ ಮಾಡಿ ಹಲ್ಲೆ ಮಾಡಲು ಪ್ರಯತ್ನಿಸಿದಾಗ ಮನನೊಂದು ಜಮೀನಿನಲ್ಲಿಯೇ ವಿಷ ಸೇವಿಸಿ ರುವುದಾಗಿ ತನ್ನ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಬೈಲು ಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈತ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ರೈತನ ಪತ್ನಿ ಮಹದೇವಮ್ಮ ಮಾತನಾಡಿ ಸೋಮವಾರ ಮಧ್ಯರಾತ್ರಿ ನಮ್ಮ ಜಮೀನಿಗೆ ಕುಮಾರ್ ಅವರ ಪತ್ನಿ ರೇಣುಕಮ್ಮ ಅವರ ಮಕ್ಕಳಾದ ಭಾಸ್ಕರ್ ಹಾಗೂ ಶ್ರೀನಿವಾಸ್ ಅವರು ಉಲುಸಾಗಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ರೊಟವೇಟರ್ ಬಳಸಿ ನಾಶ ಮಾಡಿದ್ದು, ಇದರಿಂದ ಮನನೊಂದು ತಮ್ಮ ಪತಿ ಮಂಜು ಜಮೀನಿನಲ್ಲಿಯೇ ವಿಷ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಅಕ್ರಮವಾಗಿ ಜಮೀನನ್ನು ಕಬಳಿಸಲು ಹೊಂಚು ಹಾಕುತ್ತಿರುವ ಇವರ ವಿರುದ್ಧ ಪೊಲೀಸರು ನಮಗೆ ನ್ಯಾಯ ರಕ್ಷಣೆ ನೀಡಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


