Online News in ಕನ್ನಡ

ಶಿಕ್ಷಣದ ಜೊತೆ ಜ್ಞಾನ, ಮೌಲ್ಯ ಜೀವನಕ್ಕೆ ಮುಖ್ಯ.

ಮೈಸೂರು: ಕೇವಲ ಶಿಕ್ಷಣದಲ್ಲಿ ಉತ್ತೀರ್ಣರಾಗುವುದಷ್ಟೇ ಶಿಕ್ಷಣವಲ್ಲ. ನೀವು ಕಲಿತ ಜ್ಞಾನ, ಗಳಿಸಿದ ಸ್ನೇಹಿತರು ಮತ್ತು ರೂಢಿಸಿಕೊಂಡ ಮೈಲ್ಯಗಳು ಬದುಕು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ. ಎನ್.‌ ಕೆ. ಲೋಕನಾಥ್‌ ತಿಳಿಸಿದರು.
ಸರಸ್ವತಿಪುರಂನಲ್ಲಿರುವ ಓಂಕಾರ್‌ಮಲ್‌ ಸೋಮಾನಿ ಶಿಕ್ಷಣ ಮಹಾ ವಿದ್ಯಾಲಯದ 2023-25ನೇ ಸಾಲಿನ ವಿದ್ಯಾರ್ಥಿಗಳಿಗೆ ಬಿಇಡಿ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪವಿ ಪಡೆಯುವುದು ಕಲಿಕೆಯ ಅಂತ್ಯವಲ್ಲ. ಬದಲಾಗಿ ಇದು ನೈಜ ಜಗತ್ತಿನಲ್ಲಿ ಜ್ಞಾನವನ್ನು ಬಳಸುವ ಹೊಸ ಅಧ್ಯಾಯದ ಆರಂಭ. ಇಂದಿನ ಪರಿಸ್ಥಿತಿಯಲ್ಲಿ ಕಲಿಕೆಗೆ ಅಂತ್ಯವಿಲ್ಲ. ಜಗತ್ತು ಬದಲಾದಂತ್ತೆ ನಿಮ್ಮ ಕಲಿಕೆಯೂ ಮುಂದುವರೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಎಂ.ಪುಟ್ಟಸ್ವಾಮಿರವರು ಮಾತನಾಡುತ್ತಾ, ಇಂದು ನಿಮ್ಮ ಜೀವನದ ಅತ್ಯಂತ ಮಹತ್ವದ ದಿನ. ಪದವಿ ಪಡೆಯುತ್ತಿರುವ ಎಲ್ಲಾ ಯುವಕ-ಯುವತಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ದಿನ ಕೇವಲ ಒಂದು ಶಿಕ್ಷಣದ ಅಂತ್ಯವಲ್ಲ, ಬದಲಾಗಿ ಜ್ಞಾನದ ಹೊಸ ಪಯಣದ ಆರಂಭ. ನೀವು ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ಶ್ರಮ, ತ್ಯಾಗ ಮತ್ತು ಬದ್ಧತೆಗೆ ಇಂದು ಫಲ ಸಿಕ್ಕಿದೆ. ನೀವು ಇಂದಿನ ಜಗತ್ತಿಗೆ ಅಡಿಪಾಯ ಹಾಕುತ್ತಿದ್ದೀರಿ. ಶಿಕ್ಷಣ ಎಂಬುದು ಕೇವಲ ಪುಸ್ತಕದ ಜ್ಞಾನವಲ್ಲ, ಅದು ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ. ವೈಫಲ್ಯಗಳು ಬಂದರೆ ಹೆದರಬೇಡಿ, ಅವು ಯಶಸ್ಸಿನ ಮೆಟ್ಟಿಲುಗಳು. ಸೋಲುಗಳನ್ನು ಕಲಿಯುವ ಅವಕಾಶವಾಗಿ ಸ್ವೀಕರಿಸಿ, ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳಿ ಎಂದರು.
ಈ ಯಶಸ್ಸಿನ ಹಿಂದೆ ನಿಮ್ಮ ಹೆತ್ತವರ ಬೆಂಬಲ ಮತ್ತು ಶಿಕ್ಷಕರ ಮಾರ್ಗದರ್ಶನವಿದೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸಿ. ಮುಂದೆ ನೀವು ಹೋಗುವ ದಾರಿ ಸುಲಭವಲ್ಲದಿದ್ದರೂ, ನಿಮ್ಮ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ನಿಮ್ಮನ್ನು ಯಶಸ್ಸಿನ ಉನ್ನತ ಶಿಖರಕ್ಕೆ ಕೊಂಡೊಯ್ಯುತ್ತದೆ. ದೇಶದ ಪ್ರಗತಿಗೆ ನಿಮ್ಮ ಜ್ಞಾನವನ್ನು ಬಳಸಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಅವಿರತವಾಗಿ ಶ್ರಮಿಸಿ. ನೀವು ಸಾಧಕರಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಉಷಾ.ಆರ್.ಜಿ, ಮುಖ್ಯ ಆಡಳಿತಾಧಿಕಾರಿಗಳಾದ ಕು.ಗೀತಾಂಜಲಿ.ಪಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಉಷಾ.ಆರ್.ಜಿರವರು ಹಾಗೂ ಕಾರ್ಯಕ್ರಮದ ಸಂಯೋಜಕರಾದ .ರಾಜೀವ್‌ಶರ್ಮ.ಎಂ, ಮತ್ತು ಕಾಲೇಜಿನ ಬೋಧಕ, ಬೋಧಕೇತರರ ವೃಂದ, ಪ್ರಥಮ ಹಾಗೂ ದ್ವೀತಿಯ ವರ್ಷದ ಪ್ರಶಿಕ್ಷಣಾರ್ಥಿಗಳ ಮತ್ತು ಅವರ ಪೋಷಕ ವೃಂದದವರೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

Call Now Button