Online News in ಕನ್ನಡ

Author name: ವಿಕಾಸ

ಮೈಸೂರು

ಮೊಯ್ಲಿ ಅವರದ್ದು ಬಡವರ ಪರ ನಿಲ್ಲುವ ವ್ಯಕ್ತಿತ್ವ: ಸಿಎಂ ಸಿದ್ದರಾಮಯ್ಯ ಬಣ್ಣನೆ

ಉಡುಪಿ: ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕಿಸಾನ್ ಸಭಾ ಸಭಾಂಗಣದ ಉದ್ಘಾಟಿಸಿ, ಟ್ರಸ್ಟ್ ನ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯ35 ನೇ […]

ಮೈಸೂರು

ದಾಖಲೆ ಬಜೆಟ್:‌ ತವರು ಜಿಲ್ಲೆಗೂ ದಾಖಲೆ ಕೊಡುಗೆ ನೀಡಲಿ: ಡಾ. ಸುಶ್ರುತಗೌಡ

ಮೈಸೂರು: ತಮ್ಮ ರಾಜಕೀಯ ಜೀವನದಲ್ಲಿ  ದಾಖಲೆಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತವರು ಜಿಲ್ಲೆ ಮೈಸೂರಿಗೆ  ಬಹು ದಿನಗಳ ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ದಾಖಲೆಯ ಕೊಡುಗೆ ನೀಡಬೇಕೆಂದು ಬಿಜೆಪಿ ನಾಯಕ, ಖ್ಯಾತ ನರರೋಗ ತಜ್ಞ ಡಾ. ಸುಶ್ರುತ ಗೌಡ

ಮೈಸೂರು

ಪಿರಿಯಾಪಟ್ಟಣ: ಒಳ ಮೀಸಲಾತಿ ಅನ್ಯಾಯದ ವಿರುದ್ಧ ಬಲಗೈ ಪ್ರತಿಭಟನೆ

ಪಿರಿಯಾಪಟ್ಟಣ: ಪರಿಶಿಷ್ಟಜಾತಿಯ ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ, ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬುಧವಾರ ಬಲಗೈ ಸಮುದಾಯದವರು ರಸ್ತೆ ತಡೆ ನಡೆಸಿ, ಪ್ರತಿಭಟಿಸಿ, ಉಪ ತಹಶೀಲ್ದಾರ್ ಶಕೀಲಾ ಬಾನು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಲಗೈ ಸಮುದಾಯದ

ಮೈಸೂರು

6 ತಿಂಗಳಲ್ಲಿ 105 ಕಳವು ಪ್ರಕರಣ ಭೇದಿಸಿದ ಮೈಸೂರು ನಗರ ಪೊಲೀಸರು !

ಮೈಸೂರು: ಕಳೆದ ಆರು ತಿಂಗಳಲ್ಲಿ ಮೈಸೂರು ನಗರ ಪೊಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ 105 ಕಳವು ಪ್ರಕರಣ ಭೇದಿಸಿದ್ದು, 2.96 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್,

ಮೈಸೂರು

ಐತಿಹಾಸಿಕ ಶಿಲ್ಕ್ ಪ್ಯಾಕ್ಟರಿ ಮುಚ್ಚಲು ಬಿಡುವುದಿಲ್ಲ : ಸಂಸದ ಯದುವೀರ್ ಅಭಯ

ತಿ. ನರಸೀಪುರ : ಪಟ್ಟಣದ ಐತಿಹಾಸಿಕ ಸಿಲ್ಕ್ ಪ್ಯಾಕ್ಟರಿಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟ ಎಚ್ಚರಿಕೆ ನೀಡಿದರು. ಶಿಲ್ಕ್ ಪ್ಯಾಕ್ಟರಿ ಉಳಿವಿಗಾಗಿ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ

ಮೈಸೂರು

ಮನರೇಗಾ ಮರು ಸ್ಥಾಪನೆಗೆ ಆಗ್ರಹಿಸಿ ನಂಜನಗೂಡಿನಲ್ಲಿ ಕೈ ಬೃಹತ್‌ ಪಾದಯಾತ್ರೆ

ನಂಜನಗೂಡು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಬಿ-ರಾಮ್-ಜಿ ಕಾಯ್ದೆ ರದ್ದು ಮಾಡುವುದು ಮಾತ್ರವಲ್ಲದೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ(ಮನರೇಗಾ) ಯೋಜನೆಯನ್ನು ಮರಳಿ ತರುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯಿತು. ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ಮೈಸೂರು ಜಿಲ್ಲಾಹಾಗು

ರಾಜ್ಯ

ಸರಕಾರಿ ನೇಮಕಾತಿಯಲ್ಲಿ ಬಲಗೈ ಸಮುದಾಯಕ್ಕೆ ಮತ್ತೆ ಅನ್ಯಾಯ : ಸರಕಾರಕ್ಕೆ ಪತ್ರ

ಬೆಂಗಳೂರು: ರಾಜ್ಯ ಸರಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತೆ ಬಲಗೈ ಸಮುದಾಯಕ್ಕೆ ಘನಘೋರ ಅನ್ಯಾಯವಾಗಿದೆ. ಹತ್ತು ಇಲಾಖೆಗಳ ೫೬೦ ಹುದ್ದೆಗಳಿಗೆ ನೇಮಕಾತಿ: ಶೇ. ೬+೬+೫ ಅನುಪಾತದಲ್ಲಿ ಹುದ್ದೆಗಳು ಹಂಚಿಕೆಯಾಗದೆ ಬಿ ಕ್ಯಾಟಗರಿ ಮತ್ತು ಸಿ ಕ್ಯಾಟಗರಿಗೆ ವಂಚನೆಯಾಗಿದೆ. ಒಟ್ಟು ಹತ್ತು ಇಲಾಖೆಗಳಿಂದ

ಮೈಸೂರು

ಒಳಮೀಸಲಾತಿ : ಒಡಕು ಮೂಡಿಸಲು ಬಿಜೆಪಿ-ಆರ್‌ಎಸ್‌ಎಸ್‌ ಒಳಸಂಚು : ಮಾಜಿ ಮೇಯರ್‌ ಪುರುಷೋತ್ತಮ್

ಮೈಸೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಒಳ ಮೀಸಲಾತಿಯ ಹೆಸರಿನಲ್ಲಿ ಪರಿಶಿಷ್ಟ ಜಾತಿಗಳ ನಡುವೆ ಒಡಕು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.

ಮೈಸೂರು

ರೈತರ ಬದುಕಿನಲ್ಲಿ ಐಟಿಸಿ ಕಂಪನಿ ಚಲ್ಲಾಟ : ತಂಬಾಕು ಬ್ಯಾನ್‌ಗೆ ಬೆಳೆಗಾರರ ಒತ್ತಾಯ

ಜಿಲ್ಲಾಡಳಿತದ ಸೂಚನೆಗೆ ಕಿಮ್ಮಕು ನೀಡದ ಐಟಿಸಿ ಕಂಪನಿ ಐಟಿಸಿ ಕಂಪನಿ ಅಧಿಕಾರಿಗಳಿಗೆ ಸಚಿವ ವೆಂಕಟೇಶ್‌ ಎಚ್ಚರಿಕೆ ಮೈಸೂರು: ರಾಜ್ಯದಲ್ಲಿ ತಂಬಾಕು ಬೆಳೆ ದಿಢೀರ್‌ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ತಂಬಾಕು ಬೆಳೆಯುವುದನ್ನು ಬ್ಯಾನ್‌ ಮಾಡಿ ಪರಿಹಾರ ನೀಡುವುದರ ಮೂಲಕ ರೈತರ ಜೀವವನ್ನು ಕೇಂದ್ರ

ಚಿಕ್ಕಬಳ್ಳಾಪುರ

ಕಾಂಗ್ರೆಸ್ ನ ಜನಪರ ಕಾಯ್ದೆಗಳನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ : ಸಿಎಂ

ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಅವರು ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ನರೇಗಾ ಬಚಾವ್

Call Now Button