Online News in ಕನ್ನಡ

Author name: ವಿಕಾಸ

ಮೈಸೂರು

ಗುಂಡೇಟಿಗೆ ಹೆಣ್ಣು ಚಿರತೆ ಬಲಿ : ಪ್ರಾಣಿಗಳ ಅಂಗಾಂಗಕ್ಕೆ ಪ್ರಾಣಿಗಳ ಕಳ್ಳಬೇಟೆ ಶಂಕೆ

*   ಪಿ.ಪಟ್ಟಣ ವ್ಯಾಪ್ತಿಯ ಗುಳೆದಹಳ್ಳಿ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆ * ಚಿರತೆ ದೇಹದೊಳಗೆ ಮೂರು ಗುಂಡುಗಳು ಪತ್ತೆ, ಆರೋಪಿಗಳಿಗೆ ಶೋಧ ಮೈಸೂರು (ಹುಣಸೂರು):ಕಾಡುಗಳ್ಳರ ಗುಂಡೇಟಿಗೆ 2 ವರ್ಷದ ಹೆಣ್ಣು ಚಿರತೆಯೊಂದು ಬಲಿಯಾಗಿರುವ ಘಟನೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ

ರಾಜ್ಯ

ದಾವಣಗೆರೆ-ಬಾಗಲಕೋಟೆ ಉಪ ಸಮರ: ಬಹಿರಂಗದಾಟ ಅಂತ್ಯ, ಅಂತರಂಗದಾಟ ಶುರು

ಬೆಂಗಳೂರು:- ಆಡಳಿತರೂಢಾ ಕಾಂಗ್ರೆಸ್ ಹಾಗೂ ಪ್ರತಿಪಕ್ಷವಾದ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಹೋರಾಟದ ಕಣವಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬೀದಿದೆ. ಆದರೆ, ನಿಜವಾದ ಚುನಾವಣೆ ಶುರುವಾಗೋದೆ ಮತದಾನಕ್ಕೆ ಎರಡು ದಿನ

ಮೈಸೂರು

ಡಾ:ಬಾಬು ಜಗಜೀವನ ರಾಮ್ ಅವರು ಸರ್ವ ಕ್ಷೇತ್ರದಲ್ಲೂ ತಮ್ಮದೇ ಕೊಡುಗೆ ನೀಡಿದ್ದಾರೆ : ಶಾಸಕ ಕೆ.ಹರೀಶ್ ಗೌಡ

ಮೈಸೂರು: ಡಾ: ಬಾಬು ಜಗಜೀವನ ರಾಮ್ ಅವರು ಕೃಷಿ ಸಚಿವ, ರಕ್ಷಣಾ ಸಚಿವ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದು, ಅವರು ಕಾರ್ಯನಿರ್ವಹಿಸಿದ ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ಅವರು

ಮಂಡ್ಯ

ಮಹಿಳೆಯರಿಗೆ ʻಮುಟ್ಟಿನ ಕಪ್‌ʼ  ವಿತರಿಸಿದ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣಯ್ಯ

ಗ್ರಾಮೀಣ ಮಹಿಳೆಯರ ಜೀವನ ಶೈಲಿಲ ಗುಣಾತ್ಮಕ ಬದಲಾವಣೆಗೆ ಸಂಕಲ್ಪ ಮಂಡ್ಯ:  ಪ್ರಗತಿಪರ ಶಾಸಕ ದರ್ಶನ್ ಪುಟ್ಟಣ್ಣಯ್ಯನವರು ಮೇಲುಕೋಟೆ ವಿಧಾನಸಭೆ ವ್ಯಾಪ್ತಿಯ ಚಿಕ್ಕಾಡೆ, ಹಿರೇಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ನಡೆಸಿದ್ದಾರೆ.  ಆಮೂಲಕ ಅಭಿವೃದ್ಧಿ ಎಂದರೆ

ರಾಜ್ಯ ಸುದ್ದಿಗಳು

ದಾವಣಗೆರೆ- ಬಾಗಲಕೋಟೆ ಉಪ ಚುನಾವಣೆ: ಬಿಜೆಪಿಗೆ ಸೋಲಿನ ಭಯ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಾಗಲಕೋಟೆ ಉಪಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆತಿದೆ. ಎಲ್ಲೆಡೆ

ಮೈಸೂರು

ಏ.5ರಂದು ಮೈಸೂರಿನಲ್ಲಿ ದೃಷ್ಟಿ ವಿಶೇಷಚೇತನ ಮಹಿಳೆಯರ ‘ಹೆರಿಟೇಜ್ ಕಪ್’ ಕ್ರಿಕೆಟ್ ಪಂದ್ಯಾವಳಿ

ಮೈಸೂರು: ಸಾಧನೆಗೆ ದೈಹಿಕ ನ್ಯೂನತೆ ಎಂದಿಗೂ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ, ನಿರಾಮಯ ಫೌಂಡೇಶನ್ ವತಿಯಿಂದ ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ಹೆರಿಟೇಜ್ ಕಪ್’ ಕ್ರಿಕೆಟ್ ಪಂದ್ಯಾವಳಿಯು ನಾಳೆ (ಏಪ್ರಿಲ್ 5, ಭಾನುವಾರ) ನಗರದ ಬನ್ನಿಮಂಟಪದಲ್ಲಿರುವ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮೈದಾನದಲ್ಲಿ

ಮೈಸೂರು

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಭ್ರಷ್ಟಾಚಾರ ಪ್ರಕರಣ: ಮಾಜಿ ಶಾಸಕ ಸಾರಾ ಮಹೇಶ್‌ ಹೇಳಿದ್ದೇನು ?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ.ರಾ. ಮಹೇಶ್ ‘ಸತ್ಯ ಮೇವ ಜಯತೇ’ ಎಂದು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ

ಬಾಗಲಕೋಟೆ

ವಿ.ಸೋಮಣ್ಣ ಓರ್ವ ಕೆಲಸವಿಲ್ಲದ ಕೇಂದ್ರ ಸಚಿವ: ಸಿಎಂ ಸಿದ್ದರಾಮಯ್ಯ ತಿರುಗೇಟು

ಬಾಗಲಕೋಟೆ : ಕೇಂದ್ರ ಸಚಿವ ವಿ. ಸೋಮಣ್ಣ ಬಿಜೆಪಿಯಲ್ಲಿ ಕೆಲಸ ಇಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವರು ಇಂದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ

ಮೈಸೂರು

ಜಯಲಕ್ಷ್ಮೀ ವಿಲಾಸ ಅರಮನೆಯನ್ನೇ ಖಾಸಗಿ ಕಂಪನಿಗೆ ಲೀಸ್‌ ನೀಡಲು ಮೈವಿವಿ ನಿರ್ಧಾರ !?

ಮೈಸೂರು ವಿವಿ ಸಿಂಡಿಕೇಟ್‌ ಸಭೆಯಲ್ಲಿ ಎಂಓಯು ಬಗ್ಗೆ ಚರ್ಚೆ ಖಾಸಗಿ ಕಂಪನಿಯೊಂದಕ್ಕೆ ೪೦ ವರ್ಷಗಳಿಗೆ ಉಚಿತ ಲೀಸ್‌ಗೆ ವಿರೋಧ ವಿಜಯಕಾಲ ವಿಶೇಷ: ಮೈಸೂರು: ಒಂದಾನೊಂದು ಕಾಲದಲ್ಲಿ ಶೈಕ್ಷಣಿಕ ಸಾಧನೆಗಳಿಗೆ ಪ್ರಖ್ಯಾತವಾಗಿದ್ದ ಮೈಸೂರು ವಿಶ್ವ ವಿದ್ಯಾನಿಲಯವು ಇದೀಗ ಭ್ರಷ್ಟಾಚಾರ, ಅಕ್ರಮ, ದುರಾಡಳಿತಕ್ಕೆ ಕುಖ್ಯಾತಿಯನ್ನು

ಮೈಸೂರು

ಮೈಸೂರು ಜಿಲ್ಲೆಯಲ್ಲಿ ಜನಗಣತಿ : ನಿಖರ ಮಾಹಿತಿ ನೀಡಲು ಡಿಸಿ ಮನವಿ

ಮೈಸೂರು : ಜನಗಣತಿಯಿಂದ ಜನರ ಜೀವನದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದ್ದು, ಇದರಿಂದ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಸಾರ್ವಜನಿಕರು ಜನಗಣತಿಯ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ

Call Now Button