Online News in ಕನ್ನಡ

ಅ. 23ಕ್ಕೆ ಮೈಮುಲ್‌ ಅಧ್ಯಕ್ಷಗಾದಿಗೆ ಚುನಾವಣೆ; ಸಚಿವ ಕೆ.ವೆಂಕಟೇಶ್‌

ಮೈಸೂರು: ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ಅಧ್ಯಕ್ಷರ ಸ್ಥಾನಕ್ಕೆ ಅಕ್ಟೋಬರ್ 23ಕ್ಕೆ ಚುನಾವಣೆ ನಡೆಯಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ದಸರಾ ವಸ್ತು ಪ್ರದರ್ಶನದಲ್ಲಿನ ನಂದಿನಿ ಕುಟೀರ ಮಳಿಗೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಮೈಮುಲ್ ಅಧ್ಯಕ್ಷರಾಗಿದ್ದ ಚೆಲುವರಾಜು ಅವರ ರಾಜೀನಾಮೆಯಿಂದ ಅಧಕ್ಷ ಸ್ಥಾನದ ಹುದ್ದೆ ಖಾಲಿ ಇದ್ದು, ಅದಕ್ಕೆ ಅ.23ರಂದು ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ಎಚ್‌.ಡಿ.ಕೋಟೆಯಿಂದ ಆಯ್ಕೆಯಾಗಿರುವ ಕೆ. ಈರೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

Call Now Button