Online News in ಕನ್ನಡ

ಮೈಸೂರಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಯಶಸ್ವಿ

ಮೈಸೂರು, ಅ.15- ಮೈಸೂರಿನಲ್ಲಿ ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನ ಚಾರಿತ್ರಿಕ ಯಶಸ್ಸು ಕಂಡಿದ್ದು ಸಾಂಸ್ಕøತಿಕ ನಗರಿಯಲ್ಲಿ ಜ್ಞಾನದ ಬೆಳಕು ಪ್ರಜ್ವಲಿಸಿದೆ. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮ್ಮೇಳನದ ಎರಡನೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಂಚ ಭಾಷಾ ನಟ ಪ್ರಕಾಶ್ ರಾಜ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಸಮ್ಮೇಳನಕ್ಕೆ ಮೆರಗು ನೀಡಿದರು.
ರಾಜ್ಯ ಮತ್ತು ದೇಶದ ನಾನಾ ಮೂಲೆಗಳಿಂದ ಆಗಮಿಸಿದ್ದ ಬುದ್ಧ ಪ್ರಿಯರು, ಅಂಬೇಡ್ಕರ್ ವಾದಿಗಳು, ಸಾಹಿತಿಗಳು, ಧಿಕ್ಕುಗಳು ಬುದ್ಧನ ವೈಚಾರಿಕೆ ನಿಲುವುಗಳ ಕುರಿತು ಗಂಭೀರ ಚರ್ಚೆ ನಡೆಸಿದರು. ಮೂರು ವೇದಿಕೆಗಳಲ್ಲಿ ನಡೆದ ಗೋಷ್ಟಿಗಳು ಯಶಸ್ವಿಯಾಯಿತು.

Call Now Button