Online News in ಕನ್ನಡ

ಕಸ ಎತ್ತಿ ಎಂದರೆ ಉದ್ಧಟತನ ತೋರುತ್ತಿದ್ದಾರೆ..!

ಮಾನ್ಯರೇ,

ಮೈಸೂರಿನ ಕುವೆಂಪುನಗರದ ಅಮ್ಮ ಕಾಂಪ್ಲೆಕ್ಸ್ ಬಳಿ ಹೋಟೆಲ್ ನಿರ್ಮಾಣವಾಗುತ್ತಿದ್ದು ಅದರ ಕಸ, ಥರ್ಮೋ ಕೋಲ್ ರಾಶಿ ಫುಟ್‌ ಪಾತ್‌ ನಲ್ಲೇ ಸುರಿದಿದ್ದಾರೆ. ಇದು ರಸ್ತೆಯಲ್ಲೆಲ್ಲ ಹಾರಾಡುತ್ತಿದೆ. ಕಸ ಎತ್ತಿ ಎಂದು ಹೇಳಿದರೆ ಸಂಬಂಧಪಟ್ಟವರು ಉದ್ದಟತನ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಪಾದಚಾರಿಗಳಿಗೆ ಹಾಗೂ ಓಡಾಡುತ್ತಿರುವವರಿಗೆ ಥರ್ಮೋಕೋಲ್ಗಳು ಬಂದು ಗಾಳಿಗೆ ಬಡಿಯುತ್ತಿವೆ. ಎಂ ಸ್ಯಾಂಡ್‌ ಮೇಲೆ ಕಸದ ರಾಶಿ ಬಿದ್ದಿದೆ. ಜೋರು ಗಾಳಿ ಬಂದರೆ ಮರಳಿನ ಕಣಗಳು ಪ್ರಯಾಣಿಕರ ಕಣ್ಣಿಗೆ ಬೀಳುತ್ತಿವೆ. ಇದರಿಂದ ಪ್ರಯಾಣಿಕರು ಸಂಚಾರ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರ ಪ್ರಶ್ನೆ ಮಾಡಿದರೆ ಎತ್ತಿಸೋಣ ಬಿಡಿ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಾಗರೀಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು.

  • ಪ್ರಜ್ಞಾವಂತ ನಾಗರೀಕ, ಮೈಸೂರು

 

Call Now Button