Online News in ಕನ್ನಡ

ರಸ್ತೆ ಬದಿಯ ಒಣಗಿದ ಮರಗಳನ್ನು ತೆರವುಗೊಳಿಸಿ

ಓದುಗರ ಒಡಲಾಳ:
ಮಾನ್ಯರೇ, ಬೋಗಾದಿಯಿಂದ ಗದ್ದಿಗೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಚಿಕ್ಕೆರೆ ಗೇಟ್‌ ಮತ್ತು ಜೆಟ್ಟಿಹುಂಡಿ ಗ್ರಾಮಗಳ ನಡುವೆ ಹತ್ತಕ್ಕೂ ಹೆಚ್ಚು ರಸ್ತೆ ಬದಿ ಮರಗಳು ಒಣಗಿ ನಿಂತಿವೆ. ಮಳೆ, ಗಾಳಿಗೆ ಯಾವುದೇ ಸಂದರ್ಭದಲ್ಲಿ ಈ ಮರಗಳು ಬೀಳಬಹುದು. ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದು ಮಳೆಗಾಲವಾದ್ದರಿಂದ ಗಾಳಿ, ಮಳೆಗೆ ಮರಗಳು ವಾಹನ ಸವಾರರ ಮೇಲೆ ಬಿದ್ದರೆ ಯಾರು ಜವಾಬ್ದಾರಿ ಆಗುತ್ತಾರೆ..? ಅಪಾಯ ಸಂಭವಿಸಿದ ಮೇಲೆ ಕಾರ್ಯಪ್ರವೃತ್ತರಾಗುವುದಕ್ಕೆ ಬದಲಾಗಿ ಅಪಾಯ ಸಂಭವಿಸಿದಂತೆ ನೋಡಿಕೊಳ್ಳುವುದು ಒಳ್ಳೆಯದ್ದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಒಣಗಿದ ಮರಗಳನ್ನು ಕಟಾವು ಮಾಡಬೇಕು. ಈ ಮೂಲಕ ದ್ವಿಚಕ್ರ ವಾಹನ ಚಾಲಕರು ನೆಮ್ಮದಿಯಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಅನುವು ಮಾಡಿಕೊಡಬೇಕು.

  • ಚಂದ್ರಶೇಖರ್‌, ಬೋಗಾದಿ
Call Now Button