Online News in ಕನ್ನಡ

ಗಾಂಧಿ, ಅಂಬೇಡ್ಕರ್‌ ತೋರಿದ ದಾರಿಯಲ್ಲಿ ವಿಜಯ ಕಾಲ ಸಾಗಲಿ

ಮೈಸೂರು; ಮಹಾತ್ಮ ಗಾಂಧಿ, ಅಂಬೇಡ್ಕರ್‌ ಕೂಡ ಪತ್ರಿಕೆಗಳನ್ನು ನಡೆಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಅದೇ ರೀತಿಯ ಕೆಲಸ ಈಗ ಪತ್ರಕರ್ತ ಕೆ.ದೀಪಕ್‌ ಅವರಿಂದ ಆಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ಹಾರೈಸಿದರು.

ಮೈಸೂರು ವಿಶ್ವ ವಿದ್ಯಾಲಯದ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕೆ, ವೆಬ್‌ ಸೈಟ್‌, ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೆಯ ಹೆಸರಿನಲ್ಲಿಯೇ ವಿಜಯ ಇದೆ. ಇದೇ ರೀತಿಯ ವಿಜಯ ಕೆ. ದೀಪಕ್‌ ಮತ್ತು ಪತ್ರಿಕೆಗೆ ಸಿಗಲಿ. ಅವರು ಸಮಾಜಮುಖಿಯಾದ ಪತ್ರಿಕೋದ್ಯಮ ಮಾಡಿಕೊಂಡು ಬಂದವರು. ಅವರ ಹೊಸ ಪತ್ರಿಕೆಗೆ ಶುಭವಾಗಲಿ ಎಂದು ಹಾರೈಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಇಂದು ಕೆಲವರು ಪತ್ರಿಕೋದ್ಯಮದ ಹೆಸರಿನಲ್ಲಿ ಬೇರೆ ಬೇರೆ ರೀತಿಯ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪತ್ರಕರ್ತರ ಸಂಘ ಕಡಿವಾಣ ಹಾಕಬೇಕು. ಕೆ.ದೀಪಕ್‌ ರೀತಿಯವರು ನಿಜವಾದ ಪತ್ರಿಕೋದ್ಯಮ ಮಾಡುತ್ತಿದ್ದು, ಇವರ ಪ್ರಯತ್ನಕ್ಕೆ ಯಶಸ್ಸು ಸಿಗಬೇಕು. ಉತ್ತಮ ವಾಗ್ಮಿ ಆಗಿರುವ ಅವರು ಉತ್ತಮವಾಗಿ ಪತ್ರಿಕೆ ಮುನ್ನಡೆಸಲಿ, ಅವರ ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

Call Now Button