Online News in ಕನ್ನಡ

ಸ್ಮಾರ್ಟ್‌ ಮೀಟರ್‌ ಪಡೆಯುವಲ್ಲಿ ಇರುವ ಗೊಂದಲ ನಿವಾರಿಸಿ

ಮಾನ್ಯರೇ,

ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಬೇಕು ಎಂದರೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಿದ್ದಾರೆ. ಇದನ್ನು ಪಡೆದುಕೊಳ್ಳುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಇದನ್ನು ಪಡೆಯಬೇಕಾದರೆ ಮನೆ ನಿರ್ಮಾಣ ಮಾಡಿದ ಭೂಮಿಯು ಅಲ್ಯುನೇಷನ್‌ ಆಗಿಬೇಕು, ಮನೆ ನಿರ್ಮಾಣಕ್ಕೆ ನಕ್ಷೆ ತಯಾರು ಮಾಡಿರಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಅವುಗಳ ದಾಖಲೆ ಕೇಳುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ತಮ್ಮ ತಮ್ಮ ಸ್ವಂತ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವವರ ಪರಿಸ್ಥಿತಿ ಏನು..? ನಾನು ನನ್ನ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿದ್ದು, ಈಗ ಸ್ಮಾರ್ಟ್‌ ಮೀಟರ್‌ ಹಾಕಿಸಿಕೊಳ್ಳಬೇಕು ಎಂದರೆ ಭೂಮಿ ಅಲ್ಯುನೇಷನ್‌ ಆಗಿರಬೇಕು, ಮನೆ ನಿರ್ಮಾಣದ ನಕ್ಷೆ ಬೇಕು ಎನ್ನುತ್ತಿದ್ದಾರೆ. ಇವುಗಳನ್ನು ನಾನು ಎಲ್ಲಿಂದ ತರಲಿ, ಈ ಸಂಬಂಧ ಇಂಧನ ಇಲಾಖೆ ಅಧಿಕಾರಿಗಳು ಸೂಕ್ತ ಮತ್ತು ಶೀಘ್ರವಾಗಿ ಗೊಂದಲ ನಿವಾರಣೆಗೆ ಮುಂದಾಗಬೇಕಿದೆ.

ಸುಜಾತ ಶಿವರಾಜು, ನಂಜನಗೂಡು

Call Now Button